ರಸ್ತೆ ಅಫಘಾತದಲ್ಲಿ ಸೈಂಟ್ ಆಗ್ನೇಸ್ ಕಾಲೇಜಿನ ಉಪನ್ಯಾಸಕಿ ಸಾವು

ಮಂಗಳೂರು: ರಸ್ತೆ ಅಫಘಾತದಲ್ಲಿ ಮಂಗಳೂರು ಸೈಂಟ್ ಆಗ್ನೇಸ್ ಕಾಲೇಜಿನ ಉಪನ್ಯಾಸಕಿಯೋರ್ವರು ಮೃತಪಟ್ಟ ಘಟನೆ ಬುಧವಾರ ಬೆಳಿಗ್ಗೆ ಸಂಭವಿಸಿದೆ.
ಮೃತರನ್ನು ಕುಲಶೇಖರ ನಿವಾಸಿ, ದಿರ್ವೆಂ ಕೊಂಕಣಿ ಪಾಕ್ಷಿಕ ಪತ್ರಿಕೆಯ ಸಂಪಾದಕ ಜೋನ್ ಎ ಮೋನಿಸ್ ಅವರ ಪುತ್ರಿ ಬೆಂದೂರು ಸಂತ ಅಗ್ನೇಸ್ ಕಾಲೇಜಿನ ಉಪನ್ಯಾಸಕಿ ಜೋಯ್ಲಿನ್ ಮೊನಿಸ್ (23) ಎಂದು ಗುರುತಿಸಲಾಗಿದೆ.
ಮಾಹಿತಿಗಳ ಪ್ರಕಾರ ಜೊಯ್ಲಿನ್ ತನ್ನ ಸಹೋದರಿ ಜಾಕ್ಲಿನ್ ಅವರೊಂದಿಗೆ ದ್ವಿಚಕ್ರ ವಾಹನದಲ್ಲಿ ಕಾಲೇಜಿಗೆ ತೆರಳುತ್ತಿದ್ದ ವೇಳೆ ಪಣಂಬೂರು ಕಡೆಗೆ ತೆರಳುತ್ತಿದ್ದ ರೂಟ್ ನಂಬರ್ 15 ಬಸ್ಸು ಡಿಕ್ಕಿ ಹೊಡೆದ ಪರಿಣಾಮ, ಜೊಯ್ಲಿನ್ ರಸ್ತೆಗೆ ಬಿದ್ದಿದ್ದು ಅವರ ಮೇಲೆ ಬಸ್ಸು ಹಾದುಹೋಗಿದ್ದ ಸ್ಥಳದಲ್ಲೆ ಸಾವನಪ್ಪಿದ್ದಾರೆ.
ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply