ರಸ್ತೆ ಕಾಂಕ್ರಿಟೀಕರಣ- ಸಂಚಾರ ಮಾರ್ಗ ಬದಲಾವಣೆ

ರಸ್ತೆ ಕಾಂಕ್ರಿಟೀಕರಣ- ಸಂಚಾರ ಮಾರ್ಗ ಬದಲಾವಣೆ

ಮ0ಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕದ್ರಿ ದೇವಸ್ಥಾನ ಮುಖ್ಯರಸ್ತೆ ಮಲ್ಲಿಕಟ್ಟೆ ದ್ವಾರದಿಂದ ಕದ್ರಿ ಮೈದಾನದವರೆಗೆ ರಸ್ತೆ ಕಾಂಕ್ರೀಟಿಕರಣ ಕಾಮಗಾರಿ ಆರಂಭವಾಗಿದ್ದು ಸದರಿ ಕಾಮಗಾರಿಯು 21-9-16 ರಂದು ಕೊನೆಗೊಳ್ಳಲಿದೆ. ಕಾಮಗಾರಿ ಸುಸೂತ್ರವಾಗಿ ನಿರ್ವಹಿಸಲು ಸದರಿ ರಸ್ತೆಯಲ್ಲಿ ಕಾಮಗಾರಿ ಮುಗಿಯುವವರೆಗೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೋಲೀಸ್ ಆಯುಕ್ತರ ಪ್ರಕಟಣೆ ತಿಳಿಸಿದೆ.
ಮಲ್ಲಿಕಟ್ಟೆ ದ್ವಾರದಿಂದ ಕದ್ರಿ ಮೈದಾನದವರೆಗೆ ಎಲ್ಲಾ ತರಹದ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಕದ್ರಿ ದೇವಸ್ಥಾನದ ಕಡೆಗೆ ಸಂಚರಿಸುವ ವಾಹನಗಳು ಸಿಟಿ ಆಸ್ಪತ್ರೆ ರಸ್ತೆ ಅಥವಾ ಜಾರ್ಜ್ ಮಾರ್ಟಿಸ್ ರಸ್ತೆಯ ಮೂಲಕ ಹೋಗಿ ಬರುವುದು, ಈ ತಾತ್ಕಾಲಿಕ ಅಧಿಸೂಚನೆಯು ದಿನಾಂಕ: 21-9-2016 ರವರೆಗೆ ಊರ್ಜಿತದಲ್ಲಿರುತ್ತದೆ. ಈ ನಿರ್ಬಂಧನೆಗಳು ಪೋಲೀಸ್ ವಾಹನಗಳು ಹಾಗೂ ತುರ್ತು ಸೇವೆಯ ವಾಹನಗಳಿಗೆ ಅನ್ವಯಿಸುವುದಿಲ್ಲ ಎಂದು ಪೋಲಿಸ್ ಆಯುಕ್ತ ಎಂ. ಚಂದ್ರಶೇಖರ್ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Please enter your comment!
Please enter your name here