ರಾಜ್ಯ ಪೋಲಿಸರಲ್ಲಿ ನಂಬಿಕೆ ಇದೆ; ಶರತ್ ಪ್ರಕರಣ ಎನ್ ಐ ಎ ಗೆ ವಹಿಸುವ ಅಗತ್ಯವಿಲ್ಲ; ಪ್ರಮೋದ್ ಮುತಾಲಿಕ್

ರಾಜ್ಯ ಪೋಲಿಸರಲ್ಲಿ ನಂಬಿಕೆ ಇದೆ; ಶರತ್ ಪ್ರಕರಣ ಎನ್ ಐ ಎ ಗೆ ವಹಿಸುವ ಅಗತ್ಯವಿಲ್ಲ; ಪ್ರಮೋದ್ ಮುತಾಲಿಕ್

ಮಂಗಳೂರು: ರಾಜ್ಯದ ಪೋಲಿಸರು ಶರತ್ ಕೊಲೆ ಕೇಸನ್ನು ಭೇಧಿಸಲು ಸಮರ್ಥರಿದ್ದು, ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸುವ ಅಗತ್ಯವಿಲ್ಲ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಅವರು ಸೋಮವಾರ ನಗರಲ್ಲಿ ಕೇಸೊಂದರ ಸಲುವಾಗಿ ಜಿಲ್ಲಾ ನ್ಯಾಯಾಲಯಕ್ಕೆ ಆಗಮಿಸಿದ ವೇಳೆ ಮಾಧ್ಯಮವದವರೊಂದಿಗೆ ಮಾತನಾಡಿ ಜಿಲ್ಲಾ ಪೋಲಿಸರು ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದಾರೆ. ನಮಗೆ ಜಿಲ್ಲಾ ಪೋಲಿಸರ ತನಿಖೆಯಲ್ಲಿ ನಂಬಿಕೆ ಇದ್ದು, ಯಾವುದೇ ರೀತಿಯ ತನಿಖಾ ದಳಕ್ಕೆ ವಹಿಸುವ ಅಗತ್ಯವಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಪರಿಸ್ಥಿತಿ ಈಗ ಶಾಂತವಾಗಿದ್ದರೂ ಕೆಲವೊಂದು ಸಾಮಾಜಿಕ ಜಾಲತಾಣಗಳು ಸುಳ್ಳು ಸುದ್ದಿಗಳನ್ನು ಮಾಡುತ್ತಿವೆ ಎಂದರು.

ಮುಖ್ಯಮಂತ್ರಿಗಳು ಮುತಾಲಿಕ್ ಅವರ ಬಂಧನಕ್ಕೆ ಆದೇಶ ನೀಡಿರುವುದರ ಕುರಿತು ಕೇಳಿದ ಪ್ರಶ್ನೆಗೆ ಪ್ರಶ್ನೆಗೆ ಮುಖ್ಯಮಂತ್ರಿಗಳು ಪೋಲಿಸರ ಮೇಲೆ ಹಿಂದೂ ನಾಯಕರನ್ನು ಬಂಧಿಸಲು ಒತ್ತಡ ತರಲು ಸಾಧ್ಯವಿಲ್ಲ ಯಾರನ್ನಾದರೂ ಬಂಧಿಸುವ ಅಗತ್ಯವಿದ್ದರೆ ಮಾತ್ರ ಪೋಲಿಸರು ಅವರ ಕೆಲಸವನ್ನು ಮಾಡಲಿದ್ದಾರೆ ಎಂದರು.

Leave a Reply

Please enter your comment!
Please enter your name here