ರಾಜ್ಯ ಸರಕಾರದ ಯೋಜನೆಗಳಿಗೆ ಕಾರ್ಯಕರ್ತರು ಪ್ರಚಾರ ನೀಡಿ ; ವಿನಯ್ ಕುಮಾರ್ ಸೊರಕೆ

ರಾಜ್ಯ ಸರಕಾರದ ಯೋಜನೆಗಳಿಗೆ ಕಾರ್ಯಕರ್ತರು ಪ್ರಚಾರ ನೀಡಿ ; ವಿನಯ್ ಕುಮಾರ್ ಸೊರಕೆ

ಉಡುಪಿ: ರಾಜ್ಯದ ಕಾಂಗ್ರೆಸ್ ಸರಕಾರ ಹಾಗೂ ಕೇಂದ್ರದ ಹಿಂದಿನ ಯು.ಪಿ.ಎ ಸರಕಾರ ಅನೇಕ ಜನಪರ ಕಾರ್ಯಕ್ರಮ ಹಮ್ಮಿಕೊಂಡಿದ್ದು, ನಾವು ಮಾಡಿದ ಅನೇಕ ಜನಪರ ಕೆಲಸಗಳ ಪ್ರಚಾರ ಕಡಿಮೆಯಾಗಿದೆ ಮುಂದೆ ಈ ಪ್ರಚಾರ ಕಾರ್ಯ ಕಾಂಗ್ರೆಸ್ ಕಾರ್ಯಕರ್ತರಿಂದ ಆಗಬೇಕು ಎಂದು ಕಾಪು ಕ್ಷೇತ್ರದ ಶಾಸಕರು ಮತ್ತು ಮಾಜಿ ಸಚಿವರು ವಿನಯಕುಮಾರ್ ಸೊರಕೆ ತಿಳಿಸಿದರು.

party-meeting-kaup-vinaykumarsorake

ಅವರು ಕಾಪು ದಕ್ಷಿಣ ವಲಯ ಬ್ಲಾಕ್ ಕಾಂಗ್ರೆಸ್ ಸಮಿತಿಯ ಸಭೆಯಲ್ಲಿ ಮಾತನಾಡುತ್ತ ಕ್ಷೇತ್ರದ ಅಭಿವೃದ್ಧಿಗೆ ವಿವಿಧ ಇಲಾಖೆಯಿಂದ ಅನುದಾನ ತರಲು ಪ್ರಯತ್ನ ನಡೆಸಲಾಗಿದೆ. ಕುಡಿಯುವ ನೀರಿಗಾಗಿ ಕಾಪುಗೆ 70 ಕೋಟಿ ,ಹೆಜಮಾಡಿಗೆ 50 ಕೋಟಿ, ಮಣಿಪುರಕ್ಕೆ 24 ಕೋಟಿ ಅಲ್ಲೆ ಶಿರ್ವ, ಕುರ್ಕಾಲು ಕಡೆಗೆ ಮಂಜೂರಾತಿ ಹಂತದಲ್ಲಿದೆ, ಪಕ್ಷ ಸಂಘಟನೆಯ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ. ಬೂತ್ ಮಟ್ಟದ ಕಾರ್ಯಕರ್ತರಿಗೆ ತರಬೇತಿ ಅವಶ್ಯವಿದ್ದು ಸಂಘಟನೆಯನ್ನು ಬಲಿಷ್ಠಗೊಳಿಸುವ ಬಗ್ಗೆ ಕಾರ್ಯಪ್ರವರ್ತರಾಗಬೇಕು ಎಂದು ಸೊರಕೆ ತಿಳಿಸಿದರು. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕೊಟ್ಟ ಆಶ್ವಾಸನೆ ಈಡೇರಿಸಲು ವಿಫಲವಾಗಿದ್ದು ಈ ಬಗ್ಗೆ ಮುಂದಿನ ದಿನಗಳ ಪ್ರತಿಭಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಈ ಮೂಲಕ ಜನಜಾಗೃತಿ ತರುವ ಕೆಲಸ ಮಾಡಬೇಕು ಎಂದು ಸೊರಕೆ ತಿಳಿಸಿದರು.

ಈ ಸಂದರ್ಭದಲ್ಲಿ ಕಾಪು ದಕ್ಷಿಣ ವಲಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನವೀನ್ ಚಂದ್ರ ಶೆಟ್ಟಿ, ಕಾಪುಪುರಸಭೆ ಅಧ್ಯಕ್ಷೆ ಸೌಮ್ಯ, ಕಾಪುಪುರಸಭೆ ಉಪಾಧ್ಯಕ್ಷ ಕೆ.ಎಚ್.ಉಸ್ಮಾನ್, ದಿವಾಕರ್ ಶೆಟ್ಟಿ, ಅಶೋಕ್ ಕುಮಾರ್ ಕೊಡವೂರು,ವಿನಯ ಬಲ್ಲಾಳ್, ವಿಶ್ವಾಸ್ ಅಮೀನ್, ದೀಪಕ್ ಕುಮಾರ್ ಎರ್ಮಾಳ್, ಸರಸು ಬಂಗೇರ ,ಮೊಯ್ದಿನಬ್ಬ , ಮಾನಾರ್ ಇಬ್ರಾಹಿಂ , ಎಚ್ ಅಬ್ದುಲ್, ಸುನೀಲ್ ಬಂಗೇರ, ಶಿವಾಜಿ ಸುವರ್ಣ, ಮುಂತಾದವರು ಉಪಸ್ಥಿತರಿದ್ದರು.

Leave a Reply

Please enter your comment!
Please enter your name here