ರಾಮಕೃಷ್ಣ ಮಿಶನ್ ಶ್ರೀಮದ್ಭಗವದ್ಗೀತಾ ಕಂಠಪಾಠ ಅಭಿಯಾನದ ಸಮಾರೋಪ

ರಾಮಕೃಷ್ಣ ಮಿಶನ್ ಶ್ರೀಮದ್ಭಗವದ್ಗೀತಾ ಕಂಠಪಾಠ ಅಭಿಯಾನದ ಸಮಾರೋಪ

ಮಂಗಳೂರು : ರಾಮಕೃಷ್ಣ ಮಿಶನ್ ಹಳೆ ವಿದ್ಯಾರ್ಥಿ ಸಂಘ ಮತ್ತು ಸನಾತನ ನಾಟ್ಯಾಲಯದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಜರಗಿದ ಶ್ರೀಮದ್ಭಗವದ್ಗೀತಾ ಕಂಠಪಾಠ ಅಭಿಯಾನದ ಸಮಾರೋಪ ಸಮಾರಂಭವು ಸನಾತನ ನಾಟ್ಯಾಲಯದ ಸಭಾಂಗಣದಲ್ಲಿ ನಡೆಯಿತು.

ramakrishna-ashram

ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಮಹಾರಾಜ್ ಆಶೀರ್ವಚನ ಮತ್ತು ಗೀತೆಯ ಸಂದೇಶ ನೀಡದರು. ವೇದಿಕೆಯಲ್ಲಿ ರಾಮಕೃಷ್ಣ ಹಳೆ ವಿದ್ಯಾರ್ಥಿ ಸಂಘದ ಕೆ.ವಿ. ಸತ್ಯನಾರಾಯಣ ಮತ್ತು ಸನಾತನ ನಾಟ್ಯಾಲಯದ ನೃತ್ಯ ಗುರುಗಳಾದ ವಿದುಷಿ ಶಾರದಾಮಣಿ ಶೇಖರ್ ಉಪಸ್ಥಿತರಿದ್ದರು.

ಈ ಸಮಾರಂಭದಲ್ಲಿ ಶ್ರೀಮದ್ಭಗವದ್ಗೀತಾ ಕಂಠಪಾಠ ಸ್ಪರ್ಧೆಯಲ್ಲಿ ಸಬ್ ಜೂನಿಯರ್ ವಿಭಾಗದಲ್ಲಿ ವೈಷ್ಣವಿ ಪುತ್ರನ್, ಶ್ರೀಕರಿ ಪ್ರಥಮ, ಪ್ರಜ್ಞಾ ಜಿ. ರಾವ್, ಪರ್ಣಿಕ ದ್ವಿತೀಯ, ನಮನಶ್ರೀ, ಚಿನ್ಮಯಿ ಕೋಟ್ಯಾನ್, ಧೃತಿ ಕಾಮತ್ ತೃತೀಯ, ಶ್ರೀದೇವಿ, ಪ್ರಥ್ವಿ ಮಾಬೇನ್ ಪ್ರೋತ್ಸಾಹಕರ ಹಾಗೂ ಜೂನಿಯರ್ ವಿಭಾಗದಲ್ಲಿ ಜ್ಞಾನಶ್ರೀ ಜೋಶಿ, ವೈಷ್ಣವಿ ಕೆ. ಪ್ರಥಮ, ಮೇಧಾ ದ್ವಿತೀಯ, ಜಾಹ್ನವಿ ಆರ್. ಕುಡಾಲ್, ವೃದ್ಧಿ ಡಿ. ಉಚ್ಚಿಲ್ ತೃತೀಯ ಮತ್ತು ಸೀನಿಯರ್ ವಿಭಾಗದಲ್ಲಿ ಮೇಘನಾ ಗಣೇಶ್ ಪ್ರಥಮ, ಪವಿತ್ರ ದ್ವಿತೀಯ, ಅಪೂರ್ವ ಮಧುಸೂದನ್ ತೃತೀಯ ಬಹುಮಾನವನ್ನು ಗಳಿಸಿದ್ದು ಇವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಬಳಿಕ ಸನಾತನ ನಾಟ್ಯಾಲಯದ ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.

Leave a Reply