ರಾಮಕೃಷ್ಣ ಮಿಷನ್ನಿನಲ್ಲಿಜೂನ್ 21ರಂದು ಅಂತರಾಷ್ಟ್ರೀಯಯೋಗ ದಿನ

ಮಂಗಳೂರು: ಜೂನ್ 21 2015 ಭಾನುವಾರದಂದು ವಿಶ್ವದಾದ್ಯಂತಯೋಗದಿನವನ್ನುಆಚರಿಸಲಾಗುತ್ತಿರುವ ಈ ಸಂದರ್ಭದಲ್ಲಿ ಮಂಗಳೂರು ರಾಮಕೃಷ್ಣ ಮಿಷನ್ನಿನಲ್ಲಿಕೂಡ ಈ ಕಾರ್ಯಕ್ರಮವನ್ನುಆಯೋಜಿಸಲಾಗುತ್ತಿದೆ.

ಕಾರ್ಯಕ್ರಮವು ಪೂರ್ವಾಹ್ನ 9.30ಕ್ಕೆ ಪ್ರಾರಂಭವಾಗಲಿದೆ. ವಿಧಾನ ಪರಿಷತ್ತಿನ ಸದಸ್ಯ ರಾದಕ್ಯಾಪ್ಟನ್‍ ಗಣೇಶ್‍ಕಾರ್ಣಿಕ್‍ ಅವರು ಕಾರ್ಯಕ್ರಮವನ್ನುಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಜಿತ ಕಾಮಾನಂದಜಿಯವರು ಆಶಯಭಾಷಣವನ್ನು ನೀಡಲಿದ್ದಾರೆ.  ಸಂಪನ್ಮೂಲ ವ್ಯಕ್ತಿಗಳಾಗಿ ಆವಿಷ್ಕಾರ್‍ಯೋಗ ಕೇಂದ್ರದ ನಿರ್ದೇಶಕರಾದ ಶ್ರೀ ಕುಶಾಲಪ್ಪಗೌಡ, ವಿವೇಕಾನಂದ ಕೇಂದ್ರದ ಮಂಗಳೂರು ಶಾಖೆಯ ಸಂಚಾಲಕರಾದ ಶ್ರೀ ಮೋಹನ್‍ಕುಂಬ್ಳೇಕರ್ ಹಾಗೂ ಪ್ರೊ. ಶಿಕಾರಿಪುರ ಕೃಷ್ಣಮೂರ್ತಿಯವರು ಭಾಗವಹಿಸಲಿದ್ದಾರೆ.

ಮಂಗಳೂರು ವಿಶ್ವವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನಾಘಟಕ ಹಾಗೂ ನೆಹರು ಯುವಕೇಂದ್ರ ಇವರ ಸಹಯೋಗದಲ್ಲಿ ಯೋಗ ಕಾರ್ಯಕ್ರಮವು ಜರುಗಲಿರುವುದು .

Leave a Reply

Please enter your comment!
Please enter your name here