ರಾಷ್ಟ್ರಮಟ್ಟ ಚೆಸ್ ಚಾಂಪಿಯನ್‍ಶಿಪ್‍ ಆತಿಶ್ ಬಿ ಶೆಟ್ಟಿ ಆಯ್ಕೆ

ಮಂಗಳೂರು : ಡೆರಿಕ್ಸ್ ಚೆಸ್ ಸ್ಕೂಲಿನ ಪ್ರತಿಭೆ ಮಾಸ್ಟರ್ ಆತಿಶ್ ಬಿ ಶೆಟ್ಟಿ ಮೇ 20ರಿಂದ 22ರವರೆಗೆ ಬೆಂಗಳೂರಿನಲ್ಲಿ ಸಂಯುಕ್ತ ಕರ್ನಾಟಕ ಚೆಸ್ ಸಂಸ್ಥೆಯ ಆಶ್ರಯದಲ್ಲಿ ಜರುಗಿದ 11 ವರ್ಷ ವಯೋಮಿತಿಯ ರಾಜ್ಯ ಚೆಸ್ ಛಾಂಪಿಯನ್‍ಶಿಪ್‍ನಲ್ಲಿ 9 ಸುತ್ತುಗಳಲ್ಲಿ 7 1/2 ಅಂಕಗಳನ್ನು ಗಳಿಸಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.

Aatish-B-Shetty

ತನ್ಮೂಲಕ ಜೂನ್‍ನಲ್ಲಿ ರಾಯ್‍ಪುರದಲ್ಲಿ ನಡೆಯಲಿರುವ ರಾಷ್ಟ್ರೀಯ 11 ವರ್ಷ ವಯೋಮಿತಿಯ ಚೆಸ್ ಚಾಂಪಿಯನ್‍ಶಿಪ್‍ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.
ಆತಿಶ್ ಬಿ ಶೆಟ್ಟಿ ಮಂಗಳೂರಿನ ಲೂಡ್ರ್ಸ ಸೆಂಟ್ರಲ್ ಸ್ಕೂಲಿನ ವಿದ್ಯಾರ್ಥಿ ಹಾಗೂ ಡಾ. ಬಾಲಚಂದ್ರ ಎ ಶೆಟ್ಟಿ ಹಾಗೂ ಡಾ. ಸ್ನೇಹಾ ಬಿ ಶೆಟ್ಟಿ ದಂಪತಿಗಳ ಪುತ್ರ

Leave a Reply

Please enter your comment!
Please enter your name here