ರಾಷ್ಟ್ರೀಯ ಐಸ್ ಸ್ಕೇಟೀಂಗ್ ಅವನಿಗೆ ಚಿನ್ನ, ಶ್ರವಣ್ ಮಹೇಶ್ ಬೆಳ್ಳಿ ಪದಕ

ರಾಷ್ಟ್ರೀಯ ಐಸ್ ಸ್ಕೇಟೀಂಗ್ ಅವನಿಗೆ ಚಿನ್ನ, ಶ್ರವಣ್ ಮಹೇಶ್ ಬೆಳ್ಳಿ ಪದಕ

ಮಂಗಳೂರು: ಜನವರಿ 5-6 ರಂದು 13ನೇ ರಾಷ್ಟ್ರೀಯ ಐಸ್ ಸ್ಪೀಡ್ ಸ್ಕೇಟಿಂಗ್ ಚಾಂಪಿಯನ್‍ಶಿಪ್ ಹರಿಯಾಣದ ಗುರುಗ್ರಾಮ್ ನಲ್ಲಿ ಜರಗಿತು.

ಸ್ಪರ್ಧಾಕೂಟದಲ್ಲಿ ಕರ್ನಾಟಕ ರಾಜ್ಯ ವನ್ನು ಪ್ರತಿನಿಧಿಸಿದ ಮಂಗಳೂರು ರೋಲರ್ ಸ್ಕೇಟಿಂಗ್ ಕ್ಲಬ್ ನ ಸ್ಕೇಟಿಂಗ್ ಪಟುಗಳಾದ ಅವನಿ ಎಸ್ ಕುಮಾರ್ ಚಿನ್ನ ಗೆದ್ದುದರ ಜೊತೆಗೆ ವಸುಧ ಟ್ರೋಫಿಯನ್ನು ತನ್ನದಾಗಿಸಿಕೊಂಡಳು. ಶ್ರವಣ್ ಮಹೇಶ್ 1 ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.

ಈ ಸ್ಪರ್ಧಾಕೂಟವನ್ನು ಐಸ್ ಸ್ಕೇಟಿಂಗ್ ಅಸೋಸಿಯೇಶನ್ ಆಫ್ ಇಂಡಿಯಾ ಆಯೋಜಿಸಿದ್ದು, ಶಿಮ್ಲಾದಲ್ಲಿ ಮೊದಲು ಆಯೋಜಿಸಲಾಗಿತ್ತು. ಹವಾಮಾನ ವೈಪರಿತ್ಯದ ಪರಿಣಾಮವಾಗಿ ಸ್ಪರ್ಧೆಯನ್ನು ಹರಿಯಾಣದ ಗುರುಗ್ರಾಮ್ ಎಂಬಿಯೇಶನ್ ಮಾಲಿನ ಐಸ್ ಸ್ಪೀಟ್ ಟ್ರ್ಯಾಕಿನಲ್ಲಿ ನಡೆಸಲಾಯಿತು.

ಅವನಿ ಮತ್ತು ಶ್ರವಣ್ ಮಹೇಶ್ ತರಬೇತುದಾರ ಮಹೇಶ್ ಕುಮಾರ್ ರಿಂದ ತರಬೇತಿ ಪಡೆಯುತ್ತಿದ್ದಾರೆ.

Leave a Reply