ರಾಷ್ಟ್ರೀಯ ವಿಶ್ವಬ್ರಾಹ್ಮಣ ಸಮಾಜೋದ್ಧಾರಕ ಸಭಾ ವಿದ್ಯಾರ್ಥಿ ವೇತನ ವಿತರಣೆ

ರಾಷ್ಟ್ರೀಯ ವಿಶ್ವಬ್ರಾಹ್ಮಣ ಸಮಾಜೋದ್ಧಾರಕ ಸಭಾ ವಿದ್ಯಾರ್ಥಿ ವೇತನ ವಿತರಣೆ
ಮಂಗಳೂರು. ಶ್ರೀ ಕಾಳಿಕಾಂಬಾ ಪ್ರಸಾದಿತ ರಾಷ್ಟ್ರೀಯ ವಿಶ್ವಬ್ರಾಹ್ಮಣ ಸಮಾಜೋದ್ಧಾರಕ ಸಭಾ (ರಿ) ವತಿಯಿಂದ 2016 -17ನೇ ಸಾಲಿನ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ನಗರದ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ ಕಲಾರಂಗ ಮರಿದ ಪದಲ್ಲಿ ಜರಗಿತು.

education-aid-students

96 ವರ್ಷಗಳ ಹಿಂದೆಯೇ ವಿಶ್ವಬ್ರಾಹ್ಮಣ ಸಮಾಜದ ಹಿರಿಯರೆಲ್ಲ ಸೇರಿ ವಿದ್ಯಾರ್ಥಿ ವೇತನ, ವೈದಿಕ ಶಿಕ್ಷಣ, ಸಾಮೂಹಿಕ ವಿವಾಹ, ಅನಾಥ ಶವ ಸಂಸ್ಕಾರ ಮುಂತಾದ ಸಾಮಾಜಿಕ ಸೇವೆಗಳಿಗಾಗಿ ಬಹಳ ದೂರದೃಷ್ಟಿಯಿಂದ ಸ್ಥಾಪಿಸಿಗೊಂಡಿರುವ ರಾಷ್ಟ್ರೀಯ ವಿಶ್ವಬ್ರಾಹ್ಮಣ ಸಮಾಜೋದ್ಧಾರಕ ಸಭಾದ ಪರಿಕಲ್ಪನೆ ನಿಜಕ್ಕೂ ಅರ್ಥಪೂರ್ಣ ಮತ್ತು ಸುತ್ಯಾರ್ಹ ಕೆಲಸ, ಕೀರ್ತಿಶೇಷ ವಿಶ್ವಕರ್ಮ ಕುಲೋದ್ಧಾರಕ ಪಾಲ್ಕೆ ಬಾಬುರಾಯ ಆಚಾರ್ಯ ದಶಗಳ ಕಾಲದಿಂದ ಈ ಸಭಾಕ್ಕೆ ನೀಡಿದ ಕೊಡುಗೆ ನಿಜಕ್ಕೂ ಪ್ರಶಂಸನೀಯ ಎಂದು ಮುಖ್ಯ ಅತಿಯಾಗಿ ಆಗಮಿಸಿದ್ದ ವಿಜಯವಾಣಿ ದಿನಪತ್ರಿಕೆಯ ಹಿರಿಯ ವರದಿಗಾರ ಪಿ.ಬಿ. ಹರೀಶ್ ರೈ ಹೇಳಿದರು.

ಸುಮಾರು 30ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಗೆ ಸುಮಾರು 1,61,000 ಮೌಲ್ಯದ ವಿದ್ಯಾರ್ಥಿ ವೇತನ ನೀಡಲಾಯಿತು. ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಡಾ| ಸರೋಜಿನಿ ಹರಿಶ್ಚಂದ್ರ ಆಚಾರ್ ಇವರನ್ನು ಈ ಸಂದರ್ಭ ಅಭಿನಂಧಿಸಲಾಯಿತು. ಸಭಾದ ಗೌರವಾಧ್ಯಕ್ಷ ಧನಂಜಯ ಪಾಲೆ, ಸಭಾದ ಅಧ್ಯಕ್ಷ ನಾಗರಾಜ ಪಾಲ್ಕೆ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಜತೆ ಕಾರ್ಯದರ್ಶಿ ಸುಜೀರ್ ವಿನೋದ್ ಕಾರ್ಯಕ್ರಮ ನಿರೂಪಿಸಿದರು. ಬಿ. ಉದಯ ಆಚಾರ್ಯ ವಂದಿಸಿದರು.

Leave a Reply