ರೋಹಿ ಕೊಲೆ ಆರೋಪಿ ಚರಣ್ ದುಷ್ಕರ್ಮಿಗಳಿಂದ ಕೊಲೆ

ರೋಹಿ ಕೊಲೆ ಆರೋಪಿ ಚರಣ್ ದುಷ್ಕರ್ಮಿಗಳಿಂದ ಕೊಲೆ

ಮಂಗಳೂರು: ಹಾಡುಹಗಲೇ ದುಷ್ಕರ್ಮಿಗಳಿಂದ ಮಾರಕಾಸ್ತ್ರಗಳಿಂದ ಹಲ್ಲೆಗೊಳಗಾಗಿ ಗಂಭಿರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಮೃತನನ್ನು ಮೂಡುಶೆಡ್ಡೆ ನಿವಾಸಿ ಚರಣ್ ಎಂದು ಗುರುತಿಸಲಾಗಿದೆ. ಚರಣ್ ರೋಹಿ ಕೊಲೆ ಪ್ರಕರಣದ ಪ್ರಮುಖ ಆರೋಪಿ.

Accused-in-Rohi-murder-case-Charan-Hacked-to-Death-20160819 Accused-in-Rohi-murder-case-Charan-Hacked-to-Death rohi-murder-case2-20160819 rohi-murder-case1-20160819 rohi-murder-case-20160819

ಮಾಹಿತಿಗಳ ಪ್ರಕಾರ ಶುಕ್ರವಾರ ಚರಣ್ ತನ್ನ ಪತ್ನಿಯ ಜೊತೆ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ವಾಮಂಜೂರು ಬಳಿ ಐವರ ತಂಡ ಬೊಲೆರೊ ವಾಹನದಲ್ಲಿ ಬಂದು ಅಡ್ಡಗಟ್ಟಿ ಚರಣ್ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ಚರಣನನ್ನು ಎ ಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆಸ್ಪತ್ರೆಗೆ ದಾಖಲಾಗಿದ್ದ ಚರಣ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಹಳೆ ವೈಷಮ್ಯವೇ ಘಟನೆಗೆ ಕಾರಣ ಎಂದು ತಿಳಿದುಬಂದಿದೆ. ಮಂಗಳೂರು ಗ್ರಾಮಾಂತರ ಪೋಲಿಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Leave a Reply

Please enter your comment!
Please enter your name here