ಲಂಚ ಪಡೆಯುತ್ತಿದ್ದ ಗ್ರಾಮ ಲೆಕ್ಕಿಗ ಎಸಿಬಿ ಬಲೆಗೆ

ಮಂಗಳೂರು: ಲಂಚ ಪಡೆಯುತ್ತಿದ್ದಾಗ ಗ್ರಾಮ ಲೆಕ್ಕಿಗರೋರ್ವರು ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದ ಘಟನೆ ಬಂಟ್ವಾಳ ತಾಲೂಕಿನ ಪುಣಚ ಗ್ರಾಮದಲ್ಲಿ ಗುರುವಾರ ನಡೆದಿದೆ
ನಾಗರಾಜ ಭಟ್ ರವರು ತಾನು ಖರೀದಿಸಿದ ಜಮೀನಿನ ಖಾತಾ ಬದಲಾವಣೆ ಮಾಡಿಕೊಡಲು ದಕ್ಷಿಣ ಕನ್ನಡ ಜಿಲ್ಲೆಯ ಬಂಟವಾಳ ತಾಲೂಕಿನ ವಿಟ್ಲಾ ಹೊಬಳಿಯ ಪುಣಚಾ ಗ್ರಾಮದ ಗ್ರಾಮಲೆಕ್ಕಿಗರಾದ ಶ್ರೀ ಕೆ.ಆರ್.ರಂಜೀತ್ ರವರು ರೂ. 6000/- ಲಂಚದ ಬೇಡಿಕೆ ಇಟ್ಟಿದ್ದು, ಈ ಬಗ್ಗೆ ಶ್ರೀ ನಾಗರಾಜ ಭಟ್ ರವರು ನೀಡಿದ ದೂರಿನ ಮೇರೆಗೆ ಭಷ್ಟಾಚಾರ ನಿಗ್ರಹ ದಳ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಕರಣ ದಾಖಲಾಗಿ, ಮೇ 19 ರಂದು ಭ್ರಷ್ಟಾಚಾರ ನಿಗ್ರಹ ದಳ ಮಂಗಳೂರು ಪಶ್ಚಿಮ ವಲಯದ ಪೊಲೀಸ್ ಅಧೀಕ್ಷಕರಾದ ಶ್ರೀ ಚೆನ್ನಬಸವಣ್ಣ ಎಸ್.ಎಸ್. ರವರ ಮಾರ್ಗದರ್ಶನದಲ್ಲಿ ಪೊಲೀಸ್ ಉಪಾಧೀಕ್ಷಕರಾದ ಸುಧೀರ್ ಹೆಗಡೆ ರವರ ನೇತ್ರತ್ವದಲ್ಲಿ ತನಿಖಾಧಿಕಾರಿಯವರಾದ ಯೋಗೇಶಕುಮಾರ್ ಮತ್ತು ಎಸಿಬಿ ಸಿಬ್ಬಂದಿಯವರು ಗ್ರಾಮಲೆಕ್ಕಿಗರಾದ ಕೆ.ಆರ್.ರಂಜೀತ್ ಎಂಬುವರು ರೂ. 6000/- ಲಂಚ ಪಡೆಯುತ್ತಿರುವಾಗ ದಾಳಿ ಮಾಡಿ ಸದರಿ ಸರ್ಕಾರಿ ನೌಕರನನ್ನು ವಶಕ್ಕೆ ತೆಗೆದುಕೊಂಡು ಲಂಚ ನಿರೋಧಕ ಕಾಯಿದೆ 1988 ರನ್ವಯ ಪ್ರಕರಣ ದಾಖಲಿಸಿ ದಸ್ತಗಿರಿ ಮಾಡಿ ನ್ಯಾಯಾಲಕ್ಕೆ ಮುಂದಿನ ಕ್ರಮಕ್ಕಾಗಿ ಹಾಜರುಪಡಿಸಿರುತ್ತಾರೆ.

Leave a Reply