ಲಂಚ ಸ್ವೀಕಾರ ಪ್ರಕರಣ: ಕಂದಾಯ ನಿರೀಕ್ಷಕ ತ್ರಿವಿಕ್ರಮ ಅಡಿಗ ಎಂಬಾತನಿಗೆ ಜೈಲುಶಿಕ್ಷೆ

ಉಡುಪಿ : ಲಂಚ ಸ್ವೀಕಾರ ಪ್ರಕರಣದ ಅಪರಾಧಿ ಅಜೆಕಾರು/ಮರ್ಣೆ ನಾಡಕಚೇರಿಯ ಕಂದಾಯ ನಿರೀಕ್ಷಕ ತ್ರಿವಿಕ್ರಮ ಅಡಿಗ ಎಂಬಾತನಿಗೆ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಕಾರ್ಕಳ ತಾಲೂಕಿನ ಹೆರ್ಮುಂಡೆ ಗ್ರಾಮದ ರೆಂಜದಲ್ಲಿರುವ 8.45ಎಕ್ರೆ ಜಾಗವನ್ನು ಸಿವಿಲ್‌ ನ್ಯಾಯಾಲಯವು ಸ್ಥಳೀಯ ನಿವಾಸಿ ಚಂದ್ರಶೇಖರ್‌ ನಾಯಕ್‌ ಹೆಸರಿಗೆ ಆದೇಶಿಸಿದ್ದು, ಈ ಜಾಗದ ಖಾತೆ ಬದಲಾವಣೆ ಕುರಿತು ಕಂದಾಯ ನಿರೀಕ್ಷಕ ತ್ರಿವಿಕ್ರಮ ಅಡಿಗ 2,000 ರೂ. ಹಾಗೂ ಗ್ರಾಮಕರಣಿಕರಿಗೆ 1,000 ರೂ. ಲಂಚದ ಬೇಡಿಕೆಯನ್ನು ಮುಂದಿಟ್ಟಿದ್ದರು. ಇದರ ವಿರುದಟಛಿ ಚಂದ್ರ ಶೇಖರ್‌ 2012ರ ಮಾ.5ರಂದು ಉಡುಪಿ ಲೋಕಾಯುಕ್ತ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸ್‌ ನಿರೀಕ್ಷಕ ಬಿ.ಪಿ.ದಿನೇಶ್‌ ಕುಮಾರ್‌ ಆರೋಪಿ ಹಣ ಸ್ವೀಕರಿಸುವ ವೇಳೆ ಕಾರ್ಯಾಚರಣೆ ನಡೆಸಿ ಟ್ರಾÂಪ್‌ ಮಾಡಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಬಳಿಕ ಆರೋಪಿ ವಿರುದಟಛಿ ದೋಷಾರೋಪಣ ಪಟ್ಟಿಯನ್ನು ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಿವಶಂಕರ್‌. ಬಿ.ಅಮರಣ್ಣನವರ್‌ ಡಿ.30ರಂದು ಅಪರಾಧಿಗೆ ಲಂಚ ನಿರೋಧ ಕಾಯ್ದೆಯಡಿ 1 ವರ್ಷ ಜೈಲು ಶಿಕ್ಷೆ ಹಾಗೂ 5,000 ರೂ. ದಂಡ ಹಾಗೂ ದಂಡ ಕಟ್ಟಲು ತಪ್ಪಿದಲ್ಲಿ ಹೆಚ್ಚಿನ 1 ತಿಂಗಳು ಸಾದಾ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ. ಎರಡೂ ಶಿಕ್ಷೆಗಳನ್ನು ಸಮವ್ಯಾಪ್ತಿ ಎಂದು ತೀರ್ಪು ನೀಡಿದ್ದಾರೆ. ಉಡುಪಿ ಲೋಕಾಯುಕ್ತದ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ವಿಜಯ ಕುಮಾರ್‌ ಶೆಟ್ಟಿ ಸರಕಾರದ ಪರವಾಗಿ ವಾದಿಸಿದ್ದರು.

Leave a Reply