ಲಕ್ಷ್ಮೀ ನರ್ಸಿಂಗ್ ಕಾಲೇಜಿನಲ್ಲಿ ‘ ವಿಶ್ವ ರಕ್ತದಾನ ಜಾಗ್ರತಿ’ ದಿನಾಚರಣೆ

ಮಂಗಳೂರು: ಲಕ್ಷ್ಮೀ ಮೆಮೊರಿಯಲ್ ನರ್ಸಿಂಗ್ ಕಾಲೇಜಿನ ಯುವ ರೆಡ್ ಕ್ರಾಸ್ ಸಂಘ ಹಾಗೂ ರಾಮಕ್ರಷ್ಣ ಕಾಲೇಜಿನ ಜಂಟಿ ಸಹಯೋಗದಲ್ಲಿ ‘ ವಿಶ್ವ ರಕ್ತದಾನ ಜಾಗ್ರತಿ’ ದಿನಾಚರಣೆಯನ್ನು ರಾಮಕ್ರಷ್ಣ ಕಾಲೇಜಿನಲ್ಲಿ ಆಚರಿಸಲಾಯಿತು.

11

ಮುಖ್ಯ ಅತಿಥಿಗಳಾಗಿ ಆಗಮಿಸಿದ ಎ.ಜೆ. ಅಸ್ಪತ್ರೆಯ ಅಸೋಸಿಯೇಟ್ ಪೆÇ್ರಪೆಸರ್ ಡಾ! ಅರವಿಂದ ವಿ. ಇವರು ರಕ್ತದಾನದ ಮಹತ್ವದ ಕುರಿತಾಗಿ ಮಾತನಾಡಿದರು.  ರಕ್ತದಾನಿಗಳು ಹಾಗೂ ರಕ್ತದಾನದ ಉಪಯೋಗಿಗಳು ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ತಮ್ಮ ಅನುಭವವನ್ನು ಹಂಚಿಕೊಂಡರು.

ಲಕ್ಷ್ಮೀ ಮೆಮೊರಿಯಲ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ| ಲರಿಸ್ಸಾ ಮಾರ್ಥಾ ಸ್ಯಾಮ್ಸ್, ರಾಮಕ್ರಷ್ಣ ಕಾಲೇಜಿನ ಸಂಚಾಲಕ ಶ್ರೀ ಕ್ರಷ್ಣಪ್ರಸಾದ್ ರೈ ಹಾಗೂ ಕಾಲೇಜಿನ ಸಂಚಾಲಕ ಡಾ! ಶ್ರೀ ನವೀನ್ ಶೆಟ್ಟಿ ಕಾರ್ಯಕ್ರಮದ ಸಂಘಟಕರಾದ ಲಕ್ಷ್ಮೀ ಮೆಮೊರಿಯಲ್ ನರ್ಸಿಂಗ್ ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಶಾಂಭವಿ ಹಾಗೂ ರಾಮಕ್ರಷ್ಣ ಕಾಲೇಜಿನ ಶ್ರೀಮತಿ ರೇಷ್ಮ ಶೆಟ್ಟಿ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕೊನೆಯಲ್ಲಿ ಕಾರ್ಯಕ್ರಮದ ಅಂಗವಾಗಿ ರಸಪ್ರಶ್ನೆ ಸ್ಪರ್ದೆಯನ್ನು ಏರ್ಪಡಿಸಲಾಗಿತ್ತು.  ತ್ರತೀಯ  ಬಿ.ಎಸ್ಸಿ. ನರ್ಸಿಂಗ್ ಕು! ಜಿಪ್ಪಿ ಇವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

Leave a Reply