ಲಿಟ್ಲ್‍ರಾಕ್ ಶಾಲೆಯ ಹತ್ತನೇ ತರಗತಿಯ 100% ಫಲಿತಾಂಶ

ಬ್ರಹ್ಮಾವರ: ಹನ್ನೆರಡನೇ ತರಗತಿಯ ಅದ್ಭುತ ಫಲಿತಾಂಶದ ನಂತರ ಇದೀಗ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳು ಸಹಾ ಗಮನಾರ್ಹ ಸಾಧನೆಯನ್ನು ಮಾಡಿದ್ದಾರೆ. ತರಗತಿಯ ಎಲ್ಲಾ ವಿದ್ಯಾರ್ಥಿಗಳು ಪಾಸಾಗುವುದರ ಮೂಲಕ ಶೇಕಡಾ 100 ಫಲಿತಾಂಶ ದೊರಕಿರುವುದಲ್ಲದೆ, 30 ವಿದ್ಯಾರ್ಥಿಗಳು 10 ಸಿಜಿಪಿಎ ಅಂಕ ಗಳಿಸಿದ್ದು, 91 ವಿದ್ಯಾರ್ಥಿಗಳು 9 ಗ್ರೇಡ್ ಪಾಯಿಂಟ್ ಗಳಿಗಿಂತ ಅಧಿಕ ಅಂಕ ಗಳಿಸಿರುತ್ತಾರೆ. ಸುಮಾರು ಅರ್ಧಕ್ಕಿಂತಲೂ ಅಧಿಕ ಸಂಖ್ಯೆಯ ವಿದ್ಯಾರ್ಥಿಗಳು ಶೇಕಡಾ 85 ಕ್ಕಿಂತ ಅಧಿಕವಾಗಿರುವ ಈ ಉತ್ಕೃಷ್ಟ ಶ್ರೇಣಿಯ ಸಿಜಿಪಿಎ ಅಂಕ ಗಳಿಸಿರುವುದು ಇದರಿಂದ ಶ್ರುತಪಟ್ಟಿದೆ.

ಶಾಲಾ ಆಡಳಿತ ಮಂಡಳಿಯು ಈ ಗಮನಾರ್ಹ ಸಾಧನೆಗಾಗಿ ವಿದ್ಯಾರ್ಥಿಗಳನ್ನು ಹಾಗೂ ಅಧ್ಯಾಪಕರುಗಳನ್ನು ಅಭಿನಂದಿಸಿದೆ. “ಪರಿಶ್ರಮದ ಮಹತ್ವವನ್ನು ಈ ರೀತಿಯ ಸಾಧನೆಗಳಿಂದ ಸದಾ ಕಲಿಯುವುದಲ್ಲದೆ, ಮತ್ತು ಇದು ನಮಗೆ ಶ್ರೆಷ್ಟತೆಯ ಕಡೆಗಿನ ನಮ್ಮ ಗುರಿ ಹೊಂದಲು ಇನ್ನೂ ಹೆಚ್ಚು ಪರಿಶ್ರಮಿಸಲು ಸ್ಪೂರ್ತಿದಾಯಕ್ವಾಗಿದೆ” ಎಂದು ಅಭಿಮಾನದಿಂದ ಶಾಲಾ ಪ್ರಾಂಶುಪಾಲರಾದ ಪ್ರೋ ಮ್ಯಾಥ್ಯೂ ಸಿ. ನೈನಾನ್ ರವರು ತಿಳಿಸಿರುತ್ತಾರೆ.

Leave a Reply