ಲೋಕಸಭಾ ಚುನಾವಣೆ : ಉಡುಪಿ ನಗರದಲ್ಲಿ ಅರೆ ಸೇನಾ ಪಡೆಯಿಂದ ಪಥ ಸಂಚಲನ

Spread the love

ಲೋಕಸಭಾ ಚುನಾವಣೆ : ಉಡುಪಿ ನಗರದಲ್ಲಿ ಅರೆ ಸೇನಾ ಪಡೆಯಿಂದ ಪಥ ಸಂಚಲನ

ಉಡುಪಿ : ಮತದಾರರು ನಿರ್ಭೀತಿಯಿಂದ ಮತದಾನ ಮಾಡಲು ಅವರಲ್ಲಿ ಭದ್ರತೆಯ ವಿಶ್ವಾಸ ತುಂಬುವ ನಿಟ್ಟಿನಲ್ಲಿ ಸಶಸ್ತ್ರ ಅರೆಸೇನಾ ಪಡೆಯ ಯೋಧರು ಜಿಲ್ಲಾ ಪೊಲೀಸ್ ಜಂಟಿಯಾಗಿ ಉಡುಪಿ ನಗರದ ವಿವಿಧ ಪ್ರದೇಶಗಳಲ್ಲಿ ಪಥ ಸಂಚಲನ ನಡೆಸಿದರು.

ಕೇಂದ್ರಿಯ ಅರೆ ಸೇನಾ ಪಡೆಯಾದ ಇಂಡೋ ಟಿಬೇಟ್ ಬೋರ್ಡರ್ ಫೋರ್ಸ್ ಜೊತೆಯಲ್ಲಿ ಕೆ.ಎಸ್.ಅರ್.ಪಿ ತುಕುಡಿ. ಡಿ.ಎ.ಅರ್ . ನಗರದ ಜೋಡುಕಟ್ಟೆಯಿಂದ ಆರಂಭಿಸಿ ಕೋರ್ಟ್ ರಸ್ತೆ, ಡಯಾನ ಸರ್ಕಲ್, ಕೆ ಎಮ್ ಮಾರ್ಗ, ಸರ್ವಿಸ್ ಬಸ್ ನಿಲ್ದಾಣ, ಸಿಟಿ ಬಸ್ ನಿಲ್ದಾಣ, ಕಲ್ಸಂಕ, ಕಡಿಯಾಳಿ ಮಾರ್ಗವಾಗಿ ಎಮ್ ಜಿ ಎಮ್ ಕಾಲೇಜು ತನಕ ಪಥ ಸಂಚಲನ ನಡೆಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಅವರು ಪಥ ಸಂಚಲನದ ನೇತೃತ್ವ ವಹಿಸಿದ್ದರು. ನಗರದ ಪ್ರಮುಖ ರಸ್ತೆಗಳಲ್ಲಿ ಅತ್ಯಂತ ಶಿಸ್ತು ಬದ್ಧರಾಗಿ ಕೈಯಲ್ಲಿ ತಮ್ಮ ಶಸ್ತ್ರಗಳನ್ನು ಹಿಡಿದುಕೊಂಡು ಹೆಜ್ಜೆ ಹಾಕುತ್ತಿದ್ದ ಯೋಧರನ್ನು ಸಾರ್ವಜನಿಕರು ಪ್ರಶಂಸಿದರು.

ನಗರದ ಪ್ರಮುಖ ಪ್ರದೇಶಗಳ ರಸ್ತೆಗಳಲ್ಲಿ ಯೋಧರು, ಪೊಲೀಸರು ಶಿಸ್ತಿನ ಪಥ ಸಂಚಲನದಿಂದ ನ್ಯಾಯ ಸಮ್ಮತ ಚುನಾವಣೆಗೆ ರಕ್ಷಣೆಗೆ ನಾವಿದ್ದೇವೆ ಎಂಬ ಸಂದೇಶ ಬೀರಿದರು.

ಸಹಾಯಕ ಪೊಲೀಸ್ ವರಿಷ್ಟಾಧಿಕಾರಿ ಕುಮಾರಚಂದ್ರ, ಉಡುಪಿ ಡಿವೈಎಸ್ಪಿ ಟಿ ಆರ್ ಜೈ ಶಂಕರ್, ಉಡುಪಿ ವೃತ್ತ ನಿರೀಕ್ಷಕರಾದ ಮಂಜುನಾಥ, ಮಹಿಳಾ ಠಾಣಾ ನಿರೀಕ್ಷಕರಾದ ಸಂಪತ್ ಕುಮಾರ್.ಮಣಿಪಾಲ ಠಾಣಾ ನಿರೀಕ್ಷಕರಾದ ಸುನಿಲ್ ಕುಮಾರ್ ಹಾಗೂ ಉಡುಪಿ ಉಪವಿಭಾಗದ ಪಿ.ಎಸ್.ಐ ಹಾಗೂ ಸಿಬ್ಬಂದಿ. ಅರ್.ಪಿ.ಐ ಆನಂದ ಕುಮಾರ್ ಹಾಗೂ ಇತರರು ಭಾಗವಹಿಸಿದ್ದರು.


Spread the love