ವಡಾಲದ ಜಿಎಸ್‍ಬಿ ಶ್ರೀ ಮಹಾ ಗಣಪತಿ ದರ್ಶನ ಪಡೆದ ಮಾಣಿಲ ಸ್ವಾಮೀಜಿ

ವಡಾಲದ ಜಿಎಸ್‍ಬಿ ಶ್ರೀ ಮಹಾ ಗಣಪತಿ ದರ್ಶನ ಪಡೆದ ಮಾಣಿಲ ಸ್ವಾಮೀಜಿ

ಮುಂಬಯಿ: ಮುಂಬಯಿ ಅಲ್ಲಿನ ಸಾರ್ವಜನಿಕ ಶ್ರೀ ಗಣಪತಿ ಉತ್ಸವಕ್ಕೆ ವಿಶ್ವ ಪ್ರಸಿದ್ಧಿಯ ಮಹಾರಾಷ್ಟ್ರದಲ್ಲಿನ ಶ್ರೀಮಂತ ಮತ್ತು ಬಂಗಾರದ ಗಣೇಶ ಹೆಗ್ಗಳಿಕೆ ಪಾತ್ರವಾದ ವಡಲಾ ಅಲ್ಲಿನ ಶ್ರೀ ರಾಮ ಮಂದಿರದ ದ್ವಾರಕಾನಾಥ ಭವನದಲ್ಲಿ 62ನೇ ಸಾರ್ವಜನಿಕ ಗಣೇಶೋತ್ಸವ ಸಂಭ್ರಮಿಸುತ್ತಿರುವ ಜಿಎಸ್‍ಬಿ ಸಾರ್ವಜನಿಕ ಗಣೇಶೋತ್ಸವ ಮಂಡಳಕ್ಕೆ ಬಂಟ್ವಾಳ ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ್ ಪರಮಹಂಸ ಸ್ವಾಮೀಜಿ ಇಂದಿಲ್ಲಿ ಗುರುವಾರ ಭೇಟಿ ನೀಡಿದರು.

maanila-swamy-gsb-wadala-2

ಮಹಾನಗರಿ ಮುಂಬಯಿಗೆ ಪಾದಾರ್ಪಣೆಗೈದ ವಡಾಲ ಅಲ್ಲಿನ ಗೋಕರ್ಣ ಪರ್ತಿ ಜೀವೋತ್ತಮ್ ಮಠದ ಶ್ರೀರಾಮ ಮಂದಿರಕ್ಕೆ ತೆರಳಿದ ಶ್ರೀಗಳು ರಾಮ ಮಂದಿರದಲ್ಲಿ ಪೂಜಿಸಲ್ಪಡುವ ಶ್ರೀ ಗಣಪತಿ ದರ್ಶನಗೈದು ಪೂಜೆ ಸಲ್ಲಿಸಿದರು.

ಗಣೇಶೋತ್ಸವ ಉತ್ಸವ ಸಮಿತಿ ಅಧ್ಯಕ್ಷ ಉಲ್ಲಾಸ್ ಡಿ.ಕಾಮತ್, ವಿಶ್ವಸ್ಥ ಕಾರ್ಯಾಧ್ಯಕ್ಷ ಎನ್.ಎನ್ ಪಾಲ್, ಮುಖ್ಯ ಸಂಚಾಲಕ ಗೋವಿಂದ್ ಎಸ್.ಭಟ್, ವಿಶ್ವಸ್ಥ ಸದಸ್ಯ ಶಾಂತರಾಮ ಭಟ್ ಮತ್ತಿತರ ಪದಾಧಿಕಾರಿಗಳು ಉಪಸ್ಥಿತದ್ದು ಶ್ರೀಗಳಿಗೆ ಪ್ರಸಾದ, ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಉದ್ಯಮಿಗಳಾದ ರಾಜೇಶ್ ಪಾಟೀಲ್, ಭಾಸ್ಕರ್ ಶೆಟ್ಟಿ ಪುಣೆ, ರಾಜೇಂದ್ರ ದೇವಾಡಿಗ (ಮಂಜುನಾಥ್ ಟ್ರಾವೆಲ್ಸ್‍ಲ್ಸ್ವಸಂತ್ ಭಟ್, ಕೃಷ್ಣ ಬಂಜನ್, ಮೋಹನ್ ಎಸ್.ಸುವರ್ಣ ಶ್ರೀಗಳ ಜೊತೆಗಿದ್ದರು.

Leave a Reply