ವಿಜಯನಗರ ಜನರಿಗೆ ಪರ್ಯಾಯ ರಸ್ತೆ ಮಾಡಿಸುವ ಬಗ್ಗೆ ಚಿಂತನೆ: ಲೋಬೊ

ವಿಜಯನಗರ ಜನರಿಗೆ ಪರ್ಯಾಯ ರಸ್ತೆ ಮಾಡಿಸುವ ಬಗ್ಗೆ ಚಿಂತನೆ: ಲೋಬೊ

ಮಂಗಳೂರು: ಬಜಾಲ್ ರೈಲ್ವೇ ಕೆಳಸೇತುವೆಯಿಂದ ವಿಜಯನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಈಗ ಬಂದ್ ಆಗಿದ್ದು ಇದರಿಂದಾಗಿ ಸಾರ್ವಜನಿಕರಿಗೆ ಸಂಚಾರಕ್ಕೆ ಅನಾನುಕೂಲವಾಗಿದೆ. ಸ್ಥಳೀಯವಾಗಿ ಇರುವ ಖಾಸಗಿ ಭೂಮಿಯನ್ನು ಮಾತುಕತೆ ಮೂಲಕ ಪರಿಹರಿಸಿ ಸಮ್ಮತಿಸಿದರೆ ಬದಲಿ ಪರ್ಯಾಯ ವ್ಯವಸ್ಥೆ ಕಲ್ಪಿಸುವುದಾಗಿ ಶಾಸಕ ಜೆ.ಆರ್.ಲೋಬೊ ಭರವಸೆ ನೀಡಿದರು.

ಕಳೆದ ಹಲವಾರು ತಿಂಗಳಿನಿಂದ ಈ ಭಾಗದ ಜನರಿಗೆ ಸಂಚಾರಕ್ಕೆ ಅನಾನುಕೂಲವಾಗಿದ್ದ ಹಿನ್ನೆಲೆಯಲ್ಲಿ ಸ್ಥಳೀಯರು ಶಾಸಕರಲ್ಲಿಗೆ ಬಂದು ರಸ್ತೆಯ ಸಮಸ್ಯೆಯನ್ನು ಹೇಳಿಕೊಂಡಿದ್ದರು. ಶಾಸಕ ಜೆ.ಆರ್.ಲೋಬೊ ಅವರು ಮಂಗಳವಾರ ಸ್ಥಳ ಪರಿಶೀಲನೆ ಮಾಡಿ ಜನರು ಸಂಕಷ್ಟ ಅನುಭವಿಸುತ್ತಿರುವುದನ್ನು ಖುದ್ದಾಗಿ ನೋಡಿದ ನಂತರ ಮಾತನಾಡಿದರು.

vijayanagara-road-lobo vijayanagara-road-lobo

ಮೂಲಭೂತ ಸೌಕರ್ಯ ವಂಚಿತರಾಗಿರುವವರಿಗೆ ಮೂಲಭೂತ ವ್ಯವಸ್ಥೆಯನ್ನು ಕಲ್ಪಿಸಲಾಗುವುದು.  ರಸ್ತೆಯನ್ನು ಒದಗಿಸುವುದು ಕೂಡಾ ಅಗತ್ಯವಾಗಿದ್ದು ಈ ಬಗ್ಗೆ ಸರ್ವ ಪ್ರಯತ್ನ ಒದಗಿಸಲಾಗುವುದು. ಈ ಭಾಗದ ಜನರು ಗಂಭೀರ ಪರಿಸ್ಥಿತಿ ಎದುರಿಸುತ್ತಿದ್ದು ಅಧಿಕಾರಿಗಳು ಕೂಡಲೇ ಏನೆಲ್ಲಾ ಸಮಸ್ಯೆಗಳನ್ನು ಪರಿಹರಿಸಬಹುದು ಎಂಬುದನ್ನು ತಕ್ಷಣ ನೋಡಬೇಕು ಎಂದು ಸೂಚಿಸಿದರು.

ರಾತ್ರಿ ಹೊತ್ತು ಸಂಚರಿಸುವುದಕ್ಕೆ ಭಯದ ವಾತಾವರಣ ನಿರ್ಮಾಣವಾಗಿದ್ದು ಈ ಬಗ್ಗೆ ಶಾಸಕರ ಗಮನಕ್ಕೆ ತರಲಾಗಿ ಕೂಡಲೇ ಇಲ್ಲಿರುವ ಗಿಡಗಂಟಿಗಳನ್ನು ತೆರವು ಮಾಡಿಸುವಂತೆ ರೈಲ್ವೇ ಅಧಿಕಾರಿಗಳಿಗೆ ತಿಳಿಸುವಂತೆ ಆದೇಶಿಸಿದರು.

ಒಳಚರಂಡಿ ವ್ಯವಸ್ಥೆ, ವಿದ್ಯುತ್ ದೀಪ ಸಹಿತ ಈ ಭಾಗದ ಜನರಿಗೆ ಒದಗಿಸುವಂತೆಯೂ ಅವರು ಅಧಿಕಾರಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ಕೆ.ಬಾಲಕೃಷ್ಣ ಶೆಟ್ಟಿ, ಭರತೇಶ್ ಅಮೀನ್, ಮಾಜಿ ಉಪಮೇಯರ್ ಸೇಸಮ್ಮ, ಶೋಭಾ ಕೇಶವ, ಮೋಹಿನಿ ಗಟ್ಟಿ, ಮಾಜಿ ಕಾರ್ಪೋರೇಟರ್ ಪ್ರತಿಮಾ ಮತ್ತಿತರಿದ್ದರು.

Leave a Reply

Please enter your comment!
Please enter your name here