ವಿಟ್ಲ: ಕ್ರಿಕೆಟ್ ಬೆಟ್ಟಿಂಗ್ ಮೂವರ ಬಂಧನ; 4 ಲಕ್ಷ ನಗದು ವಶ

ವಿಟ್ಲ: ಕ್ರಿಕೆಟ್ ಬೆಟ್ಟಿಂಗ್ ಮೂವರ ಬಂಧನ; 4 ಲಕ್ಷ ನಗದು ವಶ

ಮಂಗಳೂರು: ಕ್ರಿಕೆಟ್ ಬೆಟ್ಟಿಂಗ್ ಕೇಂದ್ರವೊಂದಕ್ಕೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಮೂವರನ್ನು ವಿಟ್ಲದಲ್ಲಿ ಬಂಧಿಸಿದ್ದಾರೆ.

ಬಂಧಿತರನ್ನು ಅಶೋಕ್, ಸಂತೋಷ್ ಮತ್ತು ಸುನಿಲ್ ಎಂದು ಗುರುತಿಸಲಾಗಿದೆ.

ಹಣವನ್ನು ಪಣಕ್ಕಿಟ್ಟು ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ವಿಟ್ಲದಲ್ಲಿ ದಾಳಿ ನಡೆಸಿ ಬಂಧಿತರಿಂದ ರೂ 4,20,000 ನಗದು ಮತ್ತು 5 ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಕ್ರಿಕೆಟ್ ಬೆಟ್ಟಿಂಗ್ ದಂಧೆಯನ್ನು ವಿದೇಶದಲ್ಲಿದ್ದುಕೊಂಡು ಮೊಬೈಲ್ ಮೂಲಕ ಅರುಣ್ ಮತ್ತು ಕಿರಣ್ ಎನ್ನುವವರು ನಡೆಸುತ್ತಿದ್ದ ಅವರ ಕುರಿತು ಮಾಹಿತಿಯನ್ನು ಕಲೆ ಹಾಕಿದ್ದಾರೆ.

ಈ ಕುರಿತು ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.