ವಿದ್ವಾನ್ ಮಲ್ಲಾಡಿ ಸೂರಿಬಾಬು ಇವರಿಂದ ಸಂಗೀತ ಕಾರ್ಯಾಗಾರ

ವಿದ್ವಾನ್ ಮಲ್ಲಾಡಿ ಸೂರಿಬಾಬು ಇವರಿಂದ ಸಂಗೀತ ಕಾರ್ಯಾಗಾರ

ಖ್ಯಾತ ಸಂಗೀತಗಾರರಾದ ಮಲ್ಲಾಡಿ ಸಹೋದರರ ತಂದೆ ಹಾಗೂ ಗುರುಗಳಾದ ವಿದ್ವಾನ್ ಮಲ್ಲಾಡಿ ಸೂರಿಬಾಬು ಇವರಿಂದ ಮೇ 23ರಿಂದ 26ರ ತನಕ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಾಗಾರವು ಮಂಗಳೂರಿನ ಭಾರತೀಯ ವಿದ್ಯಾ ಭವನದಲ್ಲಿ ನಡೆಯಲಿದೆ.

ಭಾರತೀಯ ವಿದ್ಯಾ ಭವನ ಮತ್ತು ಮಣಿ ಕೃಷ್ಣಸ್ವಾಮಿ ಅಕಾಡಮಿ ಸಂಸ್ಥೆಗಳ ಆಶ್ರಯದಲ್ಲಿ ನಡೆಯಲಿರುವ ಈ ಕಾರ್ಯಾಗಾರದಲ್ಲಿ ತ್ಯಾಗರಾಜರ ಅಪರೂಪದ ಕೃತಿಗಳನ್ನು ಕಲಿಸಲಾಗುವುದು ಜೊತೆಗೆ ಮನೋಧರ್ಮ ಸಂಗೀತದ ಶಿಕ್ಷಣವನ್ನು ನೀಡಲಾಗುವುದು.

ಶಿಬಿರಾರ್ಥಿಗಳ ಅರ್ಹತೆಗನುಗುಣವಾಗಿ ಮಣಿ ಕೃಷ್ಣಸ್ವಾಮಿ ಅಕಾಡಮಿಯು ಮುಂದೆ ಅಯೋಜಿಸುವ ಕಾರ್ಯಕ್ರಮಗಳಲ್ಲಿ ಅವರನ್ನು ತೊಡಗಿಸಿಕೊಳ್ಳಲಾಗುವುದು. ಆಸಕ್ತರು ಕೂಡಲೇ97427 92669 ಮೂಲಕ ತಮ್ಮ ಅರ್ಜಿಗಳನ್ನು ಕಳುಹಿಸಬೇಕಾಗಿ ಸಂಘಟಕರ ಪರವಾಗಿ ಪಿ ನಿತ್ಯಾನಂದ ರಾವ್ ಕೇಳಿಕೊಂಡಿರುತ್ತಾರೆ.