ವಿಧಾನ ಪರಿಷತ್ ಶಾಸಕರಾದ ಶ್ರೀ ಐವನ್ ಡಿ’ಸೋಜಾರವರ ಪ್ರದೇಶಾಭಿವೃದ್ದಿ  ನಿಧಿಯಿಂದ ರಸ್ತೆ ಅಭಿವೃದ್ದಿ ಕಾಮಗಾರಿಗೆ ಶಿಲಾನ್ಯಾಸ

ಮಂಗಳೂರು: ವಿಧಾನ ಪರಿಷತ್ ಶಾಸಕರಾದ ಶ್ರೀ ಐವನ್ ಡಿ’ಸೋಜಾರವರ ಪ್ರದೇಶಾಭಿವೃದ್ದಿ  ನಿಧಿಯ ರೂ.3.00 ಲಕ್ಷ ಅನುದಾನದಲ್ಲಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂ. 38ನೇ ಬೆಂದೂರು ವಾರ್ಡಿನ ಕುಟ್ಟಿ ಕಾಂಪೌಂಡು ಬಲ್ಮಠ ರಸ್ತೆ ಅಭಿವೃದ್ದಿ ಕಾಮಗಾರಿಗೆ ಶಿಲಾನ್ಯಾಸ ನೇರವೇರಿತು.

2-ivan-mlc-001

ಈ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ  ಸದಸ್ಯರಾದ ನವೀನ್ ಡಿಸೋಜಾ, ಗುತ್ತಿಗೆದಾರರಾದ ಮನೀಸ್ ರಾಜ್ ಎಸ್., ಕುಮಾರ್, ಬಶೀರ್, ಅಬ್ದುಲ್ ವಹಾಬ್,  ಬದ್ರುದ್ದೀನ್, ಅನಿಲ್ ಬಂಗೇರ, ಯೂನಿಸ್ ಸಾಲಿಸ್, ಅನಿತಾ ಜತ್ತನ್ನ, ಸುಭಾಸ್ ಸಾಲಿಯಾನ್, ಎ.ಎಸ್ ಮಣಿಪ್ಪಾಡಿ ಮುಂತಾದವರು ಉಪಸ್ಥಿತರಿದ್ದರು.

ವಿಧಾನ ಪರಿಷತ್ ಶಾಸಕರಾದ ಶ್ರೀ ಐವನ್ ಡಿ’ಸೋಜಾರವರ ಪ್ರದೇಶಾಭಿವೃದ್ದಿ  ನಿಧಿಯ ಅನುದಾನದಲ್ಲಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂ. 38ನೇ ಬೆಂದೂರು ಕಂಕನಾಡಿ ಕ್ರಾಸ್‍ನಲ್ಲಿ ಸಾರ್ವಜನಿಕ ಶೌಚಾಲಯದ ಒಳಚರಂಡಿ ಕಾಮಗಾರಿಗೆ ರೂ.1,80,000.00 ಲಕ್ಷ ಒದಗಿಸಿದ್ದರು ಇದರ ಉದ್ಘಾಟನೆ  ಇಂದು ನೇರವೇರಿತು.

1-ivan-mlc

ಈ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ  ಸದಸ್ಯರಾದ ನವೀನ್ ಡಿಸೋಜಾ, ರೋಶನ್ ಬಾಳಿಗಾ, ಗಣೇಶ್ ಬಾಳಿಗಾ, ರಾಜೇಶ್ ಬಾಳಿಗಾ, ಪರಮೇಶ್, ಸತೀಶ್, ರಾಜ್‍ಕುಮಾರ್ ಪುಷ್ಪರಾಜ್, ಸೀತಾರಾಮ್ ಶೆಟ್ಟಿ ಮನೀಶ್ ರಾಜ್ ಮುಂತಾದವರು ಉಪಸ್ಥಿತರಿದ್ದರು.

Leave a Reply

Please enter your comment!
Please enter your name here