ವಿನಾಯಕ ಬಾಳಿಕ ಹತ್ಯೆ : ನರೇಶ್  ಶೆಣೈ ನಿರೀಕ್ಷಣಾ ಜಾಮೀನು ಅರ್ಜಿ ಹೈಕೋರ್ಟ್ ತಿರಸ್ಕೃತ

ಮಂಗಳೂರು: ಆರ್ ಟಿ ಐ ಕಾರ್ಯಕರ್ತ ವಿನಾಯಕ ಬಾಳಿಗಾ ಹತ್ಯೆ ಪ್ರಕರಣದ ಆರೋಪಿ ಎನ್ನಲಾದ ನರೇಶ್ ಶೆಣೈ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಗುರುವಾರ ರಾಜ್ಯ ಹೈಕೊರ್ಟ್ ರದ್ದುಪಡಿಸಿದೆ.

naresh-shenoy-01042016

ಎರಡುವರೆ ತಿಂಗಳ ಹಿಂದೆ ಆರ್ ಟಿ ಐ ಕಾರ್ಯಕರ್ತ ವಿನಾಯಕ ಬಾಳಿಗರ ಹತ್ಯೆ ನಡೆದ ಬಳಿಕ ನಮೋ ಬ್ರಿಗೇಡ್ ಮುಖ್ಯಸ್ಥ ನರೇಶ್ ಶೆಣೈ ತಲೆಮರೆಸಿಕೊಂಡಿದ್ದು, ದಕ ಜಿಲ್ಲಾ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ ಜಿಲ್ಲಾ ನ್ಯಾಯಲಯ ಇತ್ತಿಚೇಗೆ ಆತನ ನಿರೀಕ್ಷಣ ಜಾಮೀನು ರದ್ದುಗೊಳಿಸಿದ್ದು, ಹೈಕೊರ್ಟಿಗೆ ಅರ್ಜಿಯನ್ನು ಸಲ್ಲಿಸಿದ್ದ. ಜಿಲ್ಲಾ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದ ರಾಜ್ಯ ಹೈಕೊರ್ಟ್ ನ್ಯಾಯಾಧೀಶರಾದ ಫಣೀಂದ್ರ ಜಾಮೀನು ಅರ್ಜಿಯನ್ನು ರದ್ದುಪಡಿಸಿದ್ದಾರೆ.

Leave a Reply