ವಿನಾಯಕ ಬಾಳಿಗಾ ಕೊಲೆ ಪ್ರಕರಣ ಮತ್ತೋರ್ವ ಆರೋಪಿ ಬಂಧನ

ಮಂಗಳೂರು: ಮಾರ್ಚ್ 21 ರಂದು ನಡೆದ ಆರ್ ಟಿ ಐ ಕಾರ್ಯಕರ್ತ ವಿನಾಯಕ ಬಾಳಿಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸರು ಇನ್ನೋರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತನನ್ನು ಕಾವೂರು ಶಾಂತಿ ನಗರ ನಿವಾಸಿ ಶ್ರೀಕಾಂತ್ (42) ಎಂದು ಗುರುತಿಸಲಾಗಿದೆ.

ದಿನಾಂಕ 21-03-2016 ರಂದು ಮಂಗಳೂರು ನಗರದ ಕೊಡಿಯಾಲಬೈಲು ಬೆಸೆಂಟ್ ಸ್ಕೂಲ್ 2 ನೇ ಲೇನ್ ಸ್ಟರ್ಲಿಂಗ್ ಚೇಂಬರ್ ಹಿಂಬದಿ ರಸ್ತೆಯಲ್ಲಿ ನಡೆದ ವಿನಾಯಕ ಪಿ ಬಾಳಿಗಾ ಎಂಬವರ ಕೊಲೆ ಪ್ರಕರಣ ನಡೆದಿದ್ದು, ಈ ಕೃತ್ಯಕ್ಕೆ ಸಂಬಂಧಿಸಿ ಮಂಗಳೂರು ಬರ್ಕೆ ಪೊಲೀಸ್ ಠಾಣೆಯಲ್ಲಿ ಅ.ಕ್ರ. 35/2016 ಕಲಂ: 302 ಜೊತೆಗೆ 34 ಐಪಿಸಿ ರಂತೆ ಪ್ರಕರಣ ದಾಖಲಾಗಿದ್ದು, ತನಿಖೆಯಲ್ಲಿರುತ್ತದೆ. ಈ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಸಂಬಂಧಿಸಿ ಪೊಲೀಸ್ ಅಧಿಕಾರಿಗಳ ವಿಶೇಷ ತಂಡಗಳನ್ನು ರಚಿಸಿ ಪತ್ತೆ ಕಾರ್ಯ ನಡೆಸಲಾಗುತ್ತಿದ್ದು, ಜೂನ್ 18 ರಂದು ರವೀಶ್‌ ನಾಯ್ಕ, ಪೊಲೀಸ್ ನಿರೀಕ್ಷಕರು, ಮಂಗಳೂರು ಉರ್ವಾ ಠಾಣೆ ರವರ ನೇತೃತ್ವದ ತಂಡವು ಪ್ರಕರಣದ ಪ್ರಮುಖ ಆರೋಪಿ ಶ್ರೀಕಾಂತನನ್ನು ಮುಲ್ಕಿ ಬಳಿ ಪತ್ತೆ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ.

ಮಂಗಳೂರು ಉರ್ವಾ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ರವೀಶ್‌ ನಾಯ್ಕ ಮತ್ತು ಸಿಬ್ಬಂದಿಗಳು ಪತ್ತೆ ಕಾರ್ಯದಲ್ಲಿ ಭಾಗವಹಿಸಿರುತ್ತಾರೆ.

ಈತನೂ ಸೇರಿ ಈ ಪ್ರಕರಣದಲ್ಲಿ ಈವರೆಗೂ ಒಟ್ಟು 6 ಜನ ಆರೋಪಿತರನ್ನು ಬಂಧಿಸಲಾಗಿದೆ. ಹಾಗೂ ಈ ಪ್ರಕರಣದಲ್ಲಿ ಉಳಿದ ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿರುತ್ತದೆ.

Leave a Reply

Please enter your comment!
Please enter your name here