ವಿನಾಯಕ ಬಾಳಿಗ ಕೊಲೆ ಆರೋಪಿಗಳನ್ನು ಬಂಧಿಸುವಂತೆ ಸಿಪಿಐ ಒತ್ತಾಯ

Spread the love

ಮಂಗಳೂರು: ದುಷ್ಕರ್ಮಿಗಳಿಂದ ಹತ್ಯೆಯಾದ ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಪಾಂಡುರಂಗ ಬಾಳಿಗ ರ ಹತ್ಯೆಯನ್ನು ಖಂಡಿಸುತ್ತಾ ,ಈ ಹತ್ಯೆಯಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಬಂಧಿಸಿ,ನ್ಯಾಯಾಂಗ ತನಿಖೆ ನಡೆಸಿ, ಕಠಿಣ ಶಿಕ್ಷೆ ವಿಧಿಸಬೇಕೆಂದು ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ) ಆಗ್ರಹಿಸಿದೆ.
ಕ್ರಿಮಿನಲ್ ಹಿನ್ನಲೆಯವರನ್ನು ಕೊಲೆ ಮಾಡಿದರೆ ಸರಕಾರ ರಾಜಕೀಯದ ಒತ್ತಡಕ್ಕೆ ಮಣಿದು ಪರಿಹಾರ ಘೋಷಿಸುತ್ತದೆ. ಆದರೆ ಇಂತಹ ಘಟನೆಗಳಲ್ಲಿ ಹತ್ಯೆಯಾದವರಿಗೆ ಸರಕಾರ ಪರಿಹಾರ ಘೋಷಣೆ ಮಾಡುವುದಿಲ್ಲ ಯಾಕೆ ? ಇಂತಹ ಹತ್ಯೆಗಳು ನಮ್ಮ ರಾಜ್ಯದಲ್ಲಿ ಹಾಗೂ ಇತರ ರಾಜ್ಯಗಳಲ್ಲಿ ಹೊಸತೇನಲ್ಲ! ಸರಕಾರದ ಹಾಗೂ ಪ್ರಭಾವಿ ವ್ಯಕ್ತಿಗಳ ಭ್ರಷ್ಠಾಚಾರವನ್ನು ಬಯಲಿಗೆ ಎಳೆದು ಹೋರಾಟ ಮಾಡುವವರನ್ನು ಹತ್ಯೆ ಮಾಡಿ ಗುಂಡಿಕ್ಕಿ ಕೊಂದರೂ ಸರಕಾರವು ಪರೋಕ್ಷವಾಗಿ ಕೊಲೆಕಡುಕರಿಗೆ ಪ್ರೋತ್ಸಾಹ ನೀಡುತ್ತಿದೆ. ಕಲಬುರ್ಗಿ,ಗೋವಿಂದ ಪನ್ಸಾರೆ, ದಾಬೊಲ್ಕರ್ ನಂತಹವರ ಸಾವಿಗೆ ನ್ಯಾಯ ಸಿಗದೇ ಇರುವಾಗ ಸಾಮಾನ್ಯ ಕಾರ್ಯಕರ್ತ,ರಾಜಕೀಯದಲ್ಲಿ ಗುರುತಿಸದ ವಿನಾಯಕ ಬಾಳಿಗರ ಸಾವಿಗೆ ನ್ಯಾಯ ಸಿಗಬಹುದೇ?
ಇನ್ನಾದರೂ ಸರಕಾರ ಎಚ್ಚೇತ್ತು ಕೊಲೆ ಕಡುಕರು ಯಾರೇ ಆಗಲಿ,ಯಾವುದೇ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದರೂ ಅವರನ್ನು ಕೂಡಲೇ ಬಂಧಿಸಿ ಶಿಕ್ಷಿಸುವುದರ ಮೂಲಕ ಜೀವ ಕಳಕೊಂಡ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು, ಅಲ್ಲದೆ ಸರಕಾರ ಕೂಡಲೇ ಆ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡುವುದರೊಂದಿಗೆ ರಾಜ್ಯದಲ್ಲಿರುವ ಎಲ್ಲಾ ಮಾಹಿತಿ ಹಕ್ಕು ಕಾರ್ಯಕರ್ತರಿಗೆ ಸೂಕ್ತ ಭದ್ರತೆ ನೀಡಬೇಕೆಂದು ಕೇಂದ್ರ ಹಾಗೂ ರಾಜ್ಯ ಸರಕಾರವನ್ನು ಒತ್ತಾಯಿಸಿದೆ.


Spread the love