ವಿನಾಯಕ ಬಾಳಿಗ ಕೊಲೆ : ನರೇಶ್ ಶೆಣೈ ಶೀಘ್ರ ಬಂಧನ ಸಾಧ್ಯತೆ

ವಿನಾಯಕ ಬಾಳಿಗ ಕೊಲೆ : ನರೇಶ್ ಶೆಣೈ ಶೀಘ್ರ ಬಂಧನ ಸಾಧ್ಯತೆ

ಮಂಗಳೂರು: ಆರ್ ಟಿ ಐ ಕಾರ್ಯಕರ್ತ ವಿನಾಯಕ ಬಾಳಿಗಾ ಅವರ ಕೊಲೆಯಿಂದ ಕಂಗಾಲದ ಕುಟುಂಬ ನಿಟ್ಟಿಸಿರು ಬಿಡುವಂತ ಸಂದರ್ಭ ಬಂದಿದೆ. ಕೊಲೆ ಪ್ರಕರಣದ ಪ್ರಮುಖ ಆರೋಪಿಯಾದ ನರೇಶ್ ಶೆಣೈನನ್ನು ಕೂಡಲೇ ಬಂಧಿಸಿ ಮಂಗಳೂರಿಗೆ ಕರೆ ತರುವ ಯೋಜನೆಯನ್ನು ಮಂಗಳೂರು ಪೋಲಿಸರು ಹೊಂದಿರುವ ಮಾಹಿತಿ ಇದೆ.

naresh-shenoy-01042016

ಕಳೆದ ಮಾರ್ಚ್ 21 ರಂದು ಆರ್ ಟಿ ಐ ಕಾರ್ಯಕರ್ತ ವಿನಾಯಕ ಬಾಳಿಗ ಸುಪಾರಿ ಕೊಲೆಗಾರರಿಂದ ಕೊಲೆಯಾಗಿದ್ದು, ಇದಕ್ಕೆ ಸಂಬಂಧಿಸಿ ಈಗಾಗಲೇ 6 ಆರೋಪಿಗಳನ್ನು ಮಂಗಳೂರು ಪೋಲಿಸರು ಬಂಧಿಸಿದ್ದು, ಪ್ರಮುಖ ಆರೋಪಿ ಎನಿಸಿಕೊಂಡ ನರೇಶ್ ಶೆಣೈ ಘಟನೆಯ ಬಳಿಕ ನಾಪತ್ತೆಯಾಗಿದ್ದ. ಅವರ ಬಂಧನ ಪೋಲಿಸರಿಗೆ ದೊಡ್ಡ ಸವಾಲಾಗಿತ್ತು.

ವಿನಾಯಕ ಬಾಳಿಗಾ ಕುಟುಂಬಕ್ಕೆ ನಗರ ಪೋಲಿಸ್ ಆಯುಕ್ತ ಕೂಡಲೇ ನ್ಯಾಯ ಒದಗಿಸಿ ಕೊಡುವುದಾಗಿ ಭರವಸೆ ನೀಡಿದ್ದರು. ನರೇಶ್ ಶೆಣೈ ಬಂಧನಕ್ಕಾಗಿ ವಿಶೇಷ ತನಿಖಾ ತಂಡವನ್ನು ರಚಿಸಿದ್ದರು.

ನರೇಶ್ ಶೆಣೈನನ್ನು ಕೂಡಲೇ ಬಂಧಿಸಿ ನಗರಕ್ಕೆ ಕರೆತಂದು ತನಿಖೆ ನಡೆಸುವ ಮಾಹಿತಿ ಲಭಿಸಿದೆ.

ಪೋಲಿಸರಿಗೆ ನರೇಶ್ ಶೆಣೈ ಇರುವಿಕೆಯ ಮಾಹಿತಿ ಲಭಿಸಿದ್ದು, ಕೂಡಲೇ ಬಂಧಿಸುವ ವಿಶ್ವಾಸವನ್ನು ಹೊಂದಿದ್ದಾರೆ.

Leave a Reply