ವಿವಾಹಿತ ಮಹಿಳೆ ಕೆರೆಗೆ ಹಾರಿ ಆತ್ಮಹತ್ಯೆ

ವಿವಾಹಿತ ಮಹಿಳೆ ಕೆರೆಗೆ ಹಾರಿ ಆತ್ಮಹತ್ಯೆ

ಸುಳ್ಯ: ಮಹಿಳೆಯೋರ್ವರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯ ತಾಲೂಕಿನ ಪೆರುವಾಜೆ ಮುಕ್ಕೂರು ಅನವುಗುಂಡಿ ಎಂಬಲ್ಲಿ ಬುಧವಾರ ಸಂಭವಿಸಿದೆ.

ಮೃತರನ್ನು ಪೆರುವಾಜೆ ಮುಕ್ಕೂರು ಅನವುಗುಂಡಿ ನಿವಾಸಿ ನಾರಾಯಣ ಅವರ ಪತ್ನಿ ಪದ್ಮಾವತಿ (38) ಎಂದು ಗುರುತಿಸಲಾಗಿದೆ.

suicide-women-pond-sullia-20160713

ಪೋಲಿಸ್ ಮೂಲಗಳ ಪ್ರಕಾರ ಪದ್ಮಾವತಿಯವರು ಕಳೆದ 2 ವರುಷಗಳಿಂದ ಅಸೌಖ್ಯದಿಂದ ಬಳಲುತ್ತಿದ್ದು, ತನ್ನ ತಂದೆಯ ಮನೆಯಲ್ಲಿ ಕಳೆದ 2 ತಿಂಗಳಿನಿಂದ ವಾಸವಾಗಿದ್ದರು. ಅವರಿಗೆ ಮಾನಸಿಕ ಸಮಸ್ಯೆಯಿಂದ ನಿದ್ದೆಯಲ್ಲಿ ನಡೆಯುವ ಅಭ್ಯಾಸವಿದ್ದು ಎಂದಿನಂತೆ ಮಂಗಳವಾರ ರಾತ್ರಿ ಊಟ ಮುಗಿಸಿ ಮಲಗಿದ್ದ ಪದ್ಮಾವತಿಯನ್ನು ಮಧ್ಯರಾತ್ರಿ ತಂದೆಯವರು ಹುಡುಕಿದಾಗ ತನ್ನ ಕೋಣೆಯಲ್ಲಿ ಇರಲಿಲ್ಲ ಎನ್ನಲಾಗಿದೆ.

ಬುಧವಾರ ಬೆಳಿಗ್ಗೆ ಪದ್ಮಾವತಿಯನ್ನು ಹುಡುಕಲು ಆರಂಭಿಸಿದಾಗ ಆಕೆಯ ದೇಹ ಪಕ್ಕದ ಕೆರೆಯಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ. ಮೃತ ಪದ್ಮಾವತಿ ಪತಿ ಹಾಗೂ ಮಗನನ್ನು ಅಗಲಿದ್ದಾರೆ.

ಇದೊಂದು ಆತ್ಮಹತ್ಯೆ ಎಂದು ಪೋಲಿಸರು ಸಂಶಯ ವ್ಯಕ್ತಪಡಿಸಿದ್ದು, ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Leave a Reply