ವಿವಿ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ರಹಸ್ಯ ಮೊಬೈಲ್ ಕ್ಯಾಮರ; ಕ್ರಮಕ್ಕೆ ಎಬಿವಿಪಿ ಮನವಿ

ವಿವಿ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ರಹಸ್ಯ ಮೊಬೈಲ್ ಕ್ಯಾಮರ; ಕ್ರಮಕ್ಕೆ ಎಬಿವಿಪಿ ಮನವಿ

ಮಂಗಳೂರು : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ನಿಯೋಗ ಉನ್ನತ ಶಿಕ್ಷಣ ಸಚಿವರಾದ ಬಸವರಾಜ ರಾಯರೆಡ್ಡಿ ರವರನ್ನು ಹಾಗು ಮಂಗಳೂರು ವಿವಿ ಉಪ ಕುಲಪತಿಗಳಾದ ಡಾ|| ಭೈರಪ್ಪರವರನ್ನು ಭೇಟಿ ಮಾಡಿ ವಿಶ್ವವಿದ್ಯಾನಿಲಯದ ಜೈವಿಕ ವಿಜ್ಞಾನ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ರಹಸ್ಯವಾಗಿ ಮೊಬೈಲ್ ಕ್ಯಾಮರ ಅಳವಡಿಸಿರುವ ಪ್ರಕರಣವನ್ನು ಖಂಡಿಸಿ, ಪ್ರಕರಣವನ್ನು ಸೂಕ್ತ ತನಿಖೆಗೆ ವಹಿಸಲು ಆಗ್ರಹಿಸಿ ಮನವಿ ಸಲ್ಲಿಸಲಾಯಿತು.

ABVP-Mangaluru-delegation-met-Basavaraj-Rayareddy (2)

abvp-camara-apeel

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಿಕಾ ಹಾಗು ದೃಶ್ಯ ಮಾಧ್ಯಮಗಳಲ್ಲಿ ವಿಷಯ ಪ್ರಕಟಗೊಂಡಿದ್ದು, ಈ ಘಟನೆ 24ನೇ ತಾರೀಖಿನಂದು ನಡೆದಿದ್ದರೂ ಈ ಪ್ರಕರಣ ಕೇವಲ ವಿಚಾರಣೆಯಲ್ಲಿಟ್ಟ್ರು, ಯಾವದೇ ಗಂಭೀರ ನಿರ್ಣಯ ತೆಗೆದುಕೊಳ್ಳದೆ ಘಟನೆ ನಡೆದು ಏಳು ದಿನದ ನಂತರ ವಿವಿಯ ಆಡಳಿತ ಮಂಡಳಿ ಪ್ರಕರಣವನ್ನು ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವುದು ವಿವಿಯ ಆಡಳಿತ ಮಂಡಳಿಯ ಕಾರ್ಯ ವೈಖರಿಯನ್ನು ಪ್ರಶ್ನಿಸಿ ಹಾಗು ಯೋಚಿಸಲೇಬೇಕಿದೆ.

ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ರಹಸ್ಯವಾಗಿ ಮೊಬೈಲ್ ಕ್ಯಾಮರ ಅಳವಡಿಸಿರುವ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಈ ಹಿಂದೆಯೂ ಈ ರೀತಿಯ ಘಟನೆ ನಡೆದಿರುವುದರ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿದ್ದು, ಈ ಕುರಿತು ವಿವಿ ಆಡಳಿತ ಮಂಡಳಿ ಸತ್ಯಾಸತ್ಯತೆಗಳನ್ನು ಬಹಿರಂಗಗೊಳಿಸಿ ಆ ಪ್ರಕರಣವನ್ನೂ ಪೊಲೀಸ್ ತನಿಖೆಗೆ ಒಪ್ಪಿಸಬೇಕು. ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿನಿಯರಿಗೆ ಭಯದ ವಾತವರಣವಿದ್ದು, ವಿದ್ಯಾರ್ಥಿನಿಯರ ಸುರಕ್ಷತೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ನಿಯೋಗದಲ್ಲಿ ವಿಭಾಗ ಸಹ ಸಂಚಾಲಕ್ ಚೇತನ್ ಪಡೀಲ್, ತಾಲ್ಲೂಕು ಸಂಚಾಲಕ್ ಸುದಿತ್, ಕು|| ಅನುಷ್ಕಾ, ಕು|| ವಿನಯಾ, ಶೀತಲ್‍ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

Leave a Reply

Please enter your comment!
Please enter your name here