ವಿಶೇಷ ಚೇತನಗಳ ಸೇವೆ ದೇವ ಸೇವೆಗೆ ಸಮಾನ – ಯೋಗೀಶ್ ಭಟ್

ಪತ್ರಿಕಾ ಪ್ರಕಟಣೆ

ಮಂಗಳೂರು: ‘ಬಾಂಧವ್ಯ’ಎಂಬ ವಿಶೇಷ ಯೋಜನೆಯಡಿ, ಐನೂರಕ್ಕೂ ಮಿಕ್ಕಿ ವಿಶೇಷ ಚೇತನ ಹಾಗೂ ಪ್ರಕೃತಿಯ ವೈರುಧ್ಯದಿಂದ ಬಳಲುವವರಿಗೆ ಶಾಶ್ವತ ಸಹಾಯ ಹಸ್ತ ವಿತರಣೆಯ ಕಾರ್ಯದ ಮೂಲಕ, ಲಯನ್ಸ್ ಸಂಸ್ಥೆಗಳು ದೇವರ ಸೇವೆಗೆ ಸಮಾನವಾದ ಸೇವೆ ಮಾಡುತ್ತಿವೆ ಎಂದು ಮಾಜಿ ಶಾಸಕ ಯೋಗೀಶ್ ಭಟ್ ಹೇಳಿದರು.

image002bhandavya-20160323-002

ಅವರು ಅಂತಾರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆಯ ಜಿಲ್ಲೆ -317ಡಿ, ಐನೂರಕ್ಕೂ ಮಿಕ್ಕಿ ವಿಶೇಷ ಚೇತನಗಳಿಗೆ ಮಾಸಿಕ ತಲಾ ಐನೂರು ರೂಪಾಯಿ ಸಹಾಯ ಹಸ್ತ ನೀಡುವ ಯೋಜನೆ, ‘ಬಾಂಧವ್ಯ’ವದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ, ‘ಬಾಂಧವ್ಯ’ಎಂಬ ಪೋಷಕರ ಕೈಪಿಡಿ ಬಿಡುಗಡೆ ಮಾಡಿ, ಮಾತಾಡುತ್ತಿದ್ದರು. ಉದ್ಘಾಟನೆ ಮಾಡಿದ ಕವಿತಾ ಶಾಸ್ತ್ರಿ, ಸಮಾಜದ ಪೋಷಕರು ಹಾಗೂ ದಾನಿಗಳ ನೆರವಿನಿಂದ ಮಾಸಿಕ ಸಹಾಯ ಧನವಾಗಿ ರೂಪಾಯಿ ಐನೂರರಂತೆ ವಿತರಿಸುವ ಯೋಜನೆ, ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಫಲಾನುಭವಿಗಳನ್ನು ತಲುಪುವಂತೆ, ಸುರೇಶ್ ರೈ ನೇತೃತ್ವದಲ್ಲಿ ಯೋಜನೆ ರೂಪಿಸಲಾಗುವುದು ಎಂದರು.

ತಾರಾನಾಥ ಶೆಟ್ಟಿ ಬೋಳಾರ್ ಅವರು, ಯೋಜನೆಯ ಆರಂಭಿಕ ಕೊಡುಗೆಯಾಗಿ, ತಮ್ಮ ನೇತೃತ್ವದ ಲಯನ್ಸ್ ಸಂಗಮದ ಆಯೋಜನೆಯ ವತಿಯಿಂದ ರೂಪಾಯಿ ಐವತ್ತು ಸಾವಿರಗಳನ್ನು ಕೊಡುಗೆಯಾಗಿ ನೀಡಿದರು. ನೂರು ಜನ ಫಲಾನುಭವಿಗಳಿಗೆ ಮಾಸಿಕ ಸಹಾಯ ಧನವನ್ನು ಸ್ಥಳದಲ್ಲಿಯೇ ವಿತರಿಸಲಾಯಿತು ಹಾಗೂ ದಾನಿಗಳನ್ನು ಈ ಸಂದರ್ಭದಲ್ಲಿ ಗುರುತಿಸಲಾಯಿತು.

image001bhandavya-20160323-001

ಯೋಜನೆಯ ಮುಖ್ಯ ಸಂಯೋಜಕ ಸುರೇಶ್ ರೈ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕೆ ಸಿ ಪ್ರಭು, ವೇಣುಗೋಪಾಲ ಶೆಣೈ, ವಾಣಿ ವಿ ಆಳ್ವ, ಆಶಾ ರಾವ್ ಆರೂರು, ಅರುಣ್ ಶೆಟ್ಟಿ, ಹರೀಶ್ ಎಚ್ ಆರ್, ನರಸಿಂಹ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. ಅರೆಹೊಳೆ ಸದಾಶಿವ ರಾವ್ ಪ್ರಾಸ್ತಾವಿಕ ಮಾತಾಡಿ ಯೋಜನೆಯ ವಿವರಗಳನ್ನು ಒದಗಿಸಿದರು. ಡಾ.ಜಿ ಆರ್ ಶೆಟ್ಟಿ ಸ್ವಾಗತಿಸಿ, ಮಂಜುಳಾ ಶೆಟ್ಟಿ ಧನ್ಯವಾದ ಸಮರ್ಪಿಸಿದರು. ಪ್ರವೀಣ್ ಶೆಟ್ಟಿ ನಿರೂಪಿಸಿದರು.

Leave a Reply