ವಿಶ್ವವಿದ್ಯಾನಿಲಯದ ಮಹಿಳಾ ಶೌಚಾಲಯದಲ್ಲಿ ರಹಸ್ಯ ಮೊಬೈಲ್ ಕ್ಯಾಮಾರಾ ಒರ್ವನ ಬಂಧನ

ವಿಶ್ವವಿದ್ಯಾನಿಲಯದ ಮಹಿಳಾ ಶೌಚಾಲಯದಲ್ಲಿ ರಹಸ್ಯ ಮೊಬೈಲ್ ಕ್ಯಾಮಾರಾ ಒರ್ವನ ಬಂಧನ

ಮಂಗಳೂರು: ಕೊಣಾಜೆ ವಿಶ್ವವಿದ್ಯಾನಿಲಯದ ಮಹಿಳಾ ಶೌಚಾಲಯವೊಂದರಲ್ಲಿ ರಹಸ್ಯವಾಗಿ ಮೊಬೈಲ್ ಕ್ಯಾಮಾರಾ ಅಳವಡಿಸಿದ್ದ ಆರೋಪಿಯನ್ನು ಪೋಲಿಸರು ಬಂಧಿಸಿದ್ದಾರೆ.

santhish

ಬಂಧಿತ ಆರೋಪಿಯನ್ನು ವಿಶ್ವವಿದ್ಯಾನಿಲಯದ ಎಮ್ ಎಸ್ಸಿ ಮರೈನ್ ಜಿಯೋಲಜಿ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿ ಸಂತೋಷ್ ಎಂ ಎನ್ನಲಾಗಿದೆ.

ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಮಂಗಳೂರು ನಗರ ಪೋಲಿಸ್ ಆಯುಕ್ತ ಎಂ ಚಂದ್ರಶೇಖರ್ ಅವರು ಶೌಚಾಲಯದಲ್ಲಿ ಫೋನ್ ಪತ್ತೆಯಾದ ಕುರಿತಂತೆ ವಿಶ್ವವಿದ್ಯಾನಿಲಯದ ಕುಲಸಚಿವರು ಕೊಣಾಜೆ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಶೌಚಾಲಯದಲ್ಲಿ ಪತ್ತೆಯಾದ ಮೊಬೈಲನ್ನು ಹೈದರಾಬಾದಿನ ಫೋರೆನ್ಸಿಕ್ ಲ್ಯಾಬಿಗೆ ತನಿಖೆಗಾಗಿ ಕಳುಹಿಸಲಾಗಿತ್ತು. ವೈಜ್ಞಾನಿಕ ತನಿಖೆಯಿಂದ ಮೊಬೈಲ್ ಫೋನಿನ ವಿವರ ಮತ್ತು ಸೂಕ್ತ ಸಾಕ್ಷಿಗಳನ್ನು ಕಲೆಹಾಕಲಾಗಿತ್ತು. ಗೌಪ್ಯ ತನಿಖೆಯಿಂದ ಆರೋಪಿಯ ಬಗ್ಗೆ ಸುಳಿವು ಲಭಿಸಿದ್ದು, ಆರೋಪಿಯನ್ನು ಅದರ ಆಧಾರದಲ್ಲಿ ಬಂಧಿಸಲಾಗಿದ್ದು, ವಿಚಾರಣೆಯ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಆಯುಕ್ತರು ತಿಳಿಸಿದರು.

Leave a Reply