ವಿಶ್ವ ವಿಸ್ಮಿತಗೊಂಡ ವಿಶಿಷ್ಠ ಮೇದಾವಿ ಡಾ. ಅಬ್ದುಲ್ ಕಲಾಂಗೆ ಅಂತಿಮ ಸಲಾಂ

ಭವ್ಯ ಭಾರತದ 11 ನೇ ರಾಷ್ಟ್ರಪತಿಡಾ.ಎ. ಪಿ.ಜೆ. ಅಬ್ದುಲ್ ಕಲಾಂ ನಿವೃತ್ತಿಯ ನಂತರವೂ ಯುವಪೀಳಿಗೆಗೆ ಮಾರ್ಗದರ್ಶನ ನೀಡುತ್ತಾತನ್ನ ಕೊನೆ ಉಸಿರಿನವರೆಗೂ ಕರ್ತವ್ಯನಿರತರಾಗಿದ್ದುಇಂದುಇಹಲೋಕವನ್ನು ತ್ಯಜಿಸಿದ್ದಾರೆ. ಭಾರತಕಂಡ ಮಹಾನ್ ದಿವ್ಯಚೇತನಕ್ಕೆ ಶ್ರದ್ಧಾಂಜಲಿಯನ್ನು ಅರ್ಪಿಸುತ್ತಾ ಸಾಧನೆಯ ಹೆಜ್ಜೆ ಗುರುತನ್ನು ಅವಲೋಕಿಸುವ ಒಂದು ಗೌರವಪೂರ್ವ ಲೇಖನ…

ದಕ್ಷಿಣ ಭಾರತದರಾಮೇಶ್ವರದ ಕಡಲ ಕಿನಾರೆಯ ಪಕ್ಕದ ಹಳ್ಳಿಯೊಂದರಲ್ಲಿ 1931 ರಲ್ಲಿಜನಿಸಿದ ಅಬ್ದುಲ್ ಕಲಾಂ ಮುಗ್ದತೆಯಲ್ಲಿ ಅರಳಿದ ಅಪ್ರತಿಮ ಪ್ರತಿಭೆ. ಪ್ರಶಾಂತ ಕಡಲು, ತಂಪು ತಂಗಾಳಿ ಸಾಗರದ ಅಲೆಗಳ ನಿನಾದದ ನಡುವೆ ಏಕಾಂಗಿಯಾಗಿ ಮರಳ ದಂಡೆಯ ಮೇಲೆ ಕುಳಿತು ಕನಸು ಕಾಣುತ್ತಲೇ ಬೆಳೆದ ಕಲಾಂ ಮದ್ರಾಸಿನ ಇನ್ಸ್ಟಿಟ್ಯೂಟ್‍ಆಪ್ ಟೆಕ್ನಾಲಜಿಯಲ್ಲಿ ಎರೋನಾಟಿಕ್ಸ್ ಇಂಜಿನೀಯರಿಂಗ್ ಮುಗಿಸಿ ಉದ್ಯೋಗಾಕಾಂಕ್ಷಿಯಾಗಿದ್ದ ಇವರಿಗೆ ಏಕ ಕಾಲದಲ್ಲಿ ಎರಡು ಕಡೆಗೆ ಉದ್ಯೋಗಕ್ಕೆ ಸಂದರ್ಶನಕ್ಕೆ ಹೋಗುವ ಅವಕಾಶ ಲಭ್ಯವಾಯಿತು. ತಮ್ಮ ನೆಚ್ಚಿನ ಭಾರತೀಯ ವಾಯು ಪಡೆಯ ಪೈಲೆಟ್ ಆಗಲು ಇನ್ನೊಂದು ರಕ್ಷಣಾ ಇಲಾಖೆಯಲ್ಲಿ ಸಹಾಯಕ ಸಂಶೋಧಕರಾಗಲು. ರಕ್ಷಣಾ ಇಲಾಖೆಗೆ ದೆಹಲಿ, ಪೈಲೆಟಿಗಾಗಿ ಡೆಹರಡೂನಿನಿಗೆ ಸಂದರ್ಶನಕ್ಕಾಗಿ ಮದ್ರಾಸಿನಿಂದ ಗ್ರಾಂಡ್‍ಟ್ರಂಕ್‍ಎಕ್ಸ್ ಪ್ರೆಸ್ಸ್‍ರೈಲಿನಲ್ಲಿ ದೆಹಲಿಗೆ ಪ್ರಯಾಣ, ದೆಹದ ತುಂಬಾ ಪುಳಕ, ಕಾತರ, ಭಯ, ಹಳ್ಳಿಗಾಡಿನಲ್ಲಿ ಬೆಳೆದು ಮೊದಲ ಬಾರಿಗೆ ದೆಹಲಿಯಂತ ಮಹಾನಗರಕ್ಕೆ ಹೋಗುವಾಗ ಕೀಳರಿಮೆ, ಮುಜುಗರಗಳ ಸಂಘರ್ಷಕ್ಕೆ ಸಿಕ್ಕಿ ಕಂಪಿಸುವ ಅನುಭವ, ಇದ್ಯಾವುದರ ಪರಿವೆ ಇಲ್ಲದ ರೈಲು ಚಲಿಸುತಿತ್ತು. ರೈಲಿನ ತೆರೆದ ಕಿಟಕಿಗಳ ಮೂಲಕ ಹೊರಗಿನ ದೃಶ್ಯಗಳನ್ನು ನೋಡುತ್ತಾ ನೋಡುತ್ತಾ ಕಲಾಂರು ಕಲ್ಪನೆಯಲ್ಲಿ ಮುಳುಗಿ ಹೋಗಿದ್ದರು. ತನ್ನ ಮನೆ, ಊರು, ಗೆಳೆಯರನ್ನು, ಕಡಲು, ಕಾಡು ಬಿಟ್ಟು ಹೊರಟಿದ್ದ ಕಲಾಂಗೆ ಮೊದಲ ಬಾರಿಗೆ ದಕ್ಷಿಣದಿಂದ ಉತ್ತರದವರೆಗೆ ಹಬ್ಬಿರುವ ತಾಯಿ ನಾಡಿನ ಅಗಾಧತೆಯ ಪರಿಚಯವಾಗಿತ್ತು. ಜಾತಿ, ಧರ್ಮ ಬೇರೆ ಬೇರೆ ಭಾಷೆ, ಬಣ್ಣ ಬೇರೆ ಬೇರೆಯದರೂ ದೇಶದ ಮಣ್ಣೆಲ್ಲಾ ಒಂದೇ ತರವಾಗಿತ್ತು. ಅಲ್ಲಿ ಕಾಣುವ ಜನರ ಬವಣೆ ಬಡತನ ಅನಕ್ಷರತೆ, ನೋವು ನಿರಾಸೆಗಳನ್ನು ಕಂಡರು, ಆದರೆ ಸ್ವತಂತ್ರ ಭಾರತದ ಎಲ್ಲಾ ಭಾರತೀಯರ ಕಣ್ಣಲ್ಲಿ ಹೊಂಗನಸುಗಳ ಬೆಳಕಿತ್ತು. ಅಂತಹ ಹೊಂಗನಸುಗಳನ್ನು ನನಸು ಮಾಡಬೇಕೆಂಬ ಛಲ ಭಾವನಾಜೀವಿ ಕಲಾಂಗೆ ತುಂಬಿ ಕೊಂಡಿತ್ತು.

abdul kalam

ರಕ್ಷಣಾ ಇಲಾಖೆಯ ಸಂದರ್ಶನ ಮೊದಲಿಗೆ ದೆಹಲಿಯಲ್ಲಿತ್ತು. ಕಲಾಂಗೆ ಈ ಉದ್ಯೋಗದಲ್ಲಿ ಒಲವು ಕಡಿಮೆ ಇದ್ದರೂ ಉತ್ತಮ ರೀತಿಯಲ್ಲಿ ಸಂದರ್ಶನ ನೀಡಿ, ತಮ್ಮ ಕನಸಿನ ಉದ್ಯೋಗ ಡೆಹರಡೂನ್ನಲ್ಲಿ ಪೈಲೆಟ್ ಸಂದರ್ಶನಕ್ಕೆ ತೆರಳಿದರು. ಭಾರತೀಯ ವಾಯುಪಡೆ ಪ್ರತಿಭಾವಂತ 25 ಮಂದಿ ವೈಮಾನಿಕ ಇಂಜಿನೀಯರುಗಳನ್ನು ಆಯ್ದು ಸಂದರ್ಶನ ನಡೆಸಿತ್ತು. ಕಲಾಂರು 9ನೇ ಯವರಾಗಿ ಆ0iÉ್ಕುಯಾದರು. ದುರಾದೃಷ್ಟವೆಂದರೆ ಕೇವಲ ಎಂಟು ಮಂದಿ ಪೈಲೆಟ್ ಗಳಿ ಗೆ ಮಾತ್ರ ಅವಕಾಶವಿತ್ತು. ಕೈಗೆ ಬಂದತುತ್ತು ಬಾಯಿಗೆ ಬರಲಿಲ್ಲ, ಅದಕ್ಕೂ ಮಿಗಿಲಾಗಿ ತಾನು ಎಂದೂ ಜೀವನದಲ್ಲಿ ಪೈಲೆಟ್ ಆಗಲಾರೆ ಎನ್ನುವ ಕಟು ಸತ್ಯವನ್ನು ಅರಗಿಸಿಕೊಳ್ಳುವ ಶಕ್ತಿ ಹಳ್ಳಿಗಾಡಿನ ಮುಗ್ದ ಯುವಕ ಕಲಾಂರಲ್ಲಿ ಇರಲಿಲ್ಲ. ಜೀವನದಲ್ಲಿ ಮೊದಲ ಬಾರಿಗೆ ವೈಪಲ್ಯದ ಬಂಡೆಯನ್ನು ತಲೆಯ ಮೇಲೆ ಹೊತ್ತಂತೆ ಖಿನ್ನ ಮನಸ್ಕರಾಗಿ ದೇಹವೆಲ್ಲಾ ಭಾರವಾದಂತೆ ಕೆಳಗೆ ನೋಡಿದರು. ಡೆಹರಾಡೂನಿನ ಗಿರಿಪಂಕ್ತಿಯ ಕೆಳಗೆ ಲೋಕಪಾವನೆ ಗಂಗೆ ತಣ್ಣನೆ ನಿರ್ಮಲವಾಗಿ ಹರಿಯುತಿದ್ದಳು. ಅಲ್ಲಿಂದ ಮುಂದೆ ಹೃಷಿಕೇಶದ ಪವಿತ್ರ ಯಾತ್ರಾ ಕ್ಷೇತ್ರವಿತ್ತು. ಭಾರವಾದ ಹೆಜ್ಜೆಯನಿಟ್ಟು ಗಂಗೆಯನ್ನು ಕಂಡೊಡನೆ, ತಾಯಿಯ ಮಡಿಲಲ್ಲಿ ಅಸಾಯಕ ಕಂದತಲೆಯಿಟ್ಟು ಅಳುವಂತೆ, ಗಂಗೆಯಲ್ಲಿ ಮಿಂದರು. ಸೋತ ಶರೀರಕ್ಕೆ ಚೈತನ್ಯ ಬಂದಂತಾಗಿ ಹೃಷಿಕೇಶದ ಆಶ್ರಮಕ್ಕೆ ನಡೆದು ಸ್ವಾಮಿ ಶಿವಾನಂದರ ಮುಂದೆ ಮೊರೆಹೊಕ್ಕರು. ಸ್ವಾಮಿಜಿಯ ಪ್ರಶಾಂತ ಮುಖ, ಅವರ ಸ್ವಾಂತನತುಂಬಿದ ಭರವಸೆಯ ಧ್ವನಿ ಕಲಾಂರನ್ನು ಪೂರ್ಣ ಬದಲಾಯಿಸಿತ್ತು. ವೈಪಲ್ಯದಿಂದ ನಲುಗಿ ಹೋಗಿದ್ದ ಕಲಾಂ ತಾನೆಂದು ಆಕಾಶದಲ್ಲಿ ಪೈಲೆಟ್ ಆಗಿ ಹಕ್ಕಿಯಂತೆ ರೆಕ್ಕೆಬಿಚ್ಚಿ ಹಾರಲಾರದ ಅಳಲು ತೋಡಿಕೊಂಡಾಗ ವಾಸ್ತವ ಎಂಬುದು ನಿತ್ಯದ ಸತ್ಯವೆಂದು ಬದುಕನ್ನು ಬಂದಂತೆ ಸ್ವೀಕರಿಸುವುದೇ ಬದುಕೆಂದು ಸ್ವಾಮಿಜಿಯವರು ಭೋಧಿಸಿದರು. ಕಲಾಂ ಗೆ ಅವರ ಮಾತುಗಳು ಮನವರಿಕೆಯಾಗಿ ಅವರದೃಷ್ಟಿ ಕೋನವೇ ಬದಲಾಗಿತ್ತು.ಒಂದು ವೇಳೆ ಕಲಾಂ ರ ಇಚ್ಚೆಯಂತೆ ಅವರು ಪೈಲೆಟ್ ಆಗಿದಲ್ಲಿ ಇಂದು ನಮ್ಮ ಮುಂದಿರುವ ಅಗಾಧ ಸಾಧನೆಗಳ ಮೂಲಕ ಸದೃಡ ಭಾರತವನ್ನು ಕಟ್ಟಿದ ಮಹಾನ್ ವಿಜ್ನಾನಿ ಭಾರತರತ್ನ ರೂಪುಗೊಳ್ಳದೆ ಭಾರತ ವಂಚಿತವಾಗುತಿತ್ತೇನೊ !

Adul Kalam

ಪೈಲೆಟ್ ಹುದ್ದೆಯಿಂದ ಕನಸು ಭಸ್ಮವಾಗಿ ವಂಚಿತರಾದ ಕಲಾಂಗೆ ರಕ್ಷಣಾ ಇಲಾಖೆಯಿಂದ ಕರ್ತವ್ಯಕ್ಕೆ ಕರೆ ಬಂದು 1958 ರಲ್ಲಿ ಸೇವೆಗೆ ಸೇರ್ಪಡೆಯಾದರು.ನಂತರ 1963 ರಿಂದ 1982 ರ ವರೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ ಇಸ್ರೋದಲ್ಲಿ 19 ವರ್ಷಗಳ ಸುಧೀರ್ಘ ಸೇವೆ ಗೈದರು. ಕಲಾಂರಲ್ಲಿದ್ದ ಮಹಾನ್ ವಿಜ್ನಾನಿಯ ಬಹು ಮುಖದದೈತ್ಯ ಶಕ್ತಿಯ ದರ್ಶನ ಇಸ್ರೋದಲ್ಲಾಯಿತು. ಪ್ರಾಕೃತಿಕ ಸಂಪತ್ತು, ಜನ ಸಂಪತ್ತಿನಿಂದ ಭಾರತ ಮುಂದುವರಿದ ರಾಷ್ಟ್ರಗಳಂತೆ ಸದೃಡವಾಗಿ ಬೆಳೆಯಬೇಕಾಗಿತ್ತು. ಇದನ್ನು ಮನಗಂಡ ಕಲಾಂರ ವಿಜ್ನಾನಿ ತಂಡ, ಶಿಕ್ಷಣ, ಮಾಹಿತಿ, ಹವಮಾನ, ಕೃಷಿ ಎಲ್ಲಾ ವಿಷಯಗಳ ಬಗ್ಗೆ ತಂತ್ರಜ್ನಾನದಲ್ಲಿ ಸ್ವಾವಲಂಬನೆ ಸಾಧಿಸುವಛಲ ತೊಟ್ಟರು.ಈ ನಿಟ್ಟಿನಲ್ಲಿ ಭಾರತವು ಸದೃಡವಾಗಿ ಬೆಳೆಯುವುದು ಮುಂದುವರಿದ ರಾಷ್ಟ್ರಗಳಿಗೆ ಬೇಕಿರಲಿಲ್ಲ. ಕಾರಣಜಗತ್ತಿನ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಭಾರತವು ಸಮಗ್ರವಾಗಿ ತಂತ್ರಜ್ನಾನದಲ್ಲಿ ವಿಶ್ವದಲ್ಲಿ ಬೆಳೆಯುವುದೆಂಬ ಭಯ, ಅಸೂಯೆ ಅವುಗಳಿಗಿತ್ತು.

ಭಾರತವುಎಲ್ಲ ರೀತಿಯ ಸಂಪತ್ತು, ಪ್ರತಿಭೆಗಳಿದ್ದರೂ ಅವುಗಳನ್ನು ಬಳಸಿಕೊಳ್ಳುವ ಸೌಲಭ್ಯ ನಮ್ಮಲಿರಲಿಲ್ಲ. ಇಂತಹ ಸ್ಥಿತಿಯಲ್ಲಿ ಅಪ್ಪಟ ದೇಶೀಯ ಪ್ರತಿಭೆಯ ಕಲಾಂರ ತಂಡದಲ್ಲಿ ದೇಶ ಪ್ರೇಮದ ಛಲ ಮೂಡಿಸಿತ್ತು. ದೇಶವನ್ನು ನಮ್ಮದೆ ಸಂಪನ್ಮೂಲ, ನಮ್ಮದೆ ಶ್ರಮ ಶಕ್ತಿ, ನಮ್ಮದೆ ಜ್ನಾನ ಸಂಪತ್ತು, ನಮ್ಮದೆ ಸವಾಲು, ಸಾಧನೆಗಳ ಮೇಲೆ ಹಂತ ಹಂತವಾಗಿ ಬಲಾಡ್ಯವಾಗಿ ಕಟ್ಟಬೇಕೆಂಬ ದೀಕ್ಷೆತೆಗೆದುಕೊಂಡ ಫಲವಾಗಿ ಭಾರತದ ಮೊಟ್ಟ ಮೊದಲ ದೇಶಿ ನಿರ್ಮಿತ ಉಪಗ್ರಹ ಉಡಾವಣಾ ವಾಹಕ ಎಸ್. ಎಲ್. ವಿ.-3 ನಿರ್ಮಾಣದ ಮಹತ್ವದ ಯೋಜನೆಗೆ ಕಲಾಂ ನಿರ್ಧೇಶಕರಾದರು. ಎಸ್.ಎಲ್.ವಿ-3 ರ ವಿನ್ಯಾಸ ಅಭಿವೃದ್ದಿ ಆರ್ಹತೆ ಮತ್ತು ಉಡಾವಣಾ ಪ್ರಯೋಗ ಇವಿಷ್ಟು ಕ್ಷೇತ್ರದಲ್ಲಿ ತೊಡಗಿಸಿಕೊಂಡ ನೂರಾರು ವಿಜ್ನಾನಿಗಳ ಅನುಭವ, ಸಾಧನೆ, ಒಗ್ಗಟ್ಟು ಇವುಗಳ ಅಂತಿಮ ಯಶಸ್ಸನ್ನು ಪರಾಮರ್ಷಿಸುವ ನಾಯಕರಾಗಿದ್ದರು ಕಲಾಂ.

ಭಾರತದಲ್ಲಿ ತಂತ್ರಜ್ನಾನ, ಅಭಿವೃದ್ದಿ, ರಕ್ಷಣಾ ಸಾಮರ್ಥ್ಯ, ರಾಕೇಟುಗಳ ಅಭಿವೃದ್ದಿ ಯೋಜನೆಗಳಿಗೆ ಭಾರತದ ಪ್ರಥಮ ಪ್ರಧಾನಿ ಕನಸುಗಾರ ಜವಹರ್ ಲಾಲ್ ನೆಹರೂ ಅದ್ಯತೆ ನೀಡಿ ಘೋಷಿಸಿದರು. ನೆರೆ ರಾಷ್ಟ್ರಗಳ ಯುದ್ದದ ಅನುಭವದಿಂದ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸುವ ಎಲ್ಲ ಯೋಜನೆಗಳಿಗೆ ಅಂದಿನ ಪ್ರಧಾನಿ ಇಂದಿರಾಗಾಂಧಿ ಮುಕ್ತ ನೆರವು , ಪ್ರೋತ್ಸಾಹ ನೀಡಿದರು. ಭಾರತದ ಆರು ಮಂದಿ ಪ್ರಧಾನಿಗಳಿಗೆ ವೈಜ್ನಾನಿಕ ಸಲಹೆಗಾರರಾಗಿ ಅಪಾರ ಅನುಭವದ ಅಪ್ಪಟ ದೇಶಪ್ರೇಮಿ 1970-80 ರ ಅವಧಿಯ ಎಸ್.ಎಲ್.ವಿ.-3 ಯಶಸ್ವಿಯಾಗಿ ಉಡಾವಣೆಯಾಗುವ ತನಕ ತಮ್ಮನ್ನು ತಾವೇ ತೊಡಗಿಸಿಕೊಂಡು, ಜೊತೆಗೆ ಅರ್ಪಣಾ ಮೊನೋಭಾವದ ವಿಜ್ನಾನಿಗಳ ಶ್ರಮದ ಫಲವಾಗಿ ಕೆಲವೇ ವರ್ಷಗಳಲ್ಲಿ ಪ್ರಯೋಗಾರ್ಥ ಉಪಗ್ರಹಗಳಾದ ಅರ್ಯಭಟ, ಭಾಸ್ಕರಗಳ ಯಶಸ್ವಿ ಉಡಾವಣೆ. 1980 ರಜುಲೈ 18 ರಂದುಎಸ್. ಎಲ್.ವಿ.-3 ಯಶಸ್ವಿಯಾಗಿ ಉಡಾವಣೆಯಾಯಿತು.

ಭಾಹ್ಯಕಾಶ ತಂತ್ರಜ್ನಾನದ ಪಿತಾಮಹಾಡಾ.ವಿಕ್ರಂ ಸಾರಾಬಾಯಿ, ಅವರ ನಂತರ ಅವರ ಸ್ಥಾನ ತುಂಬಿದ ಭಾಹ್ಯಕಾಶ ವಿಜ್ನಾನಿ ಡಾ.ಸತೀಶ್ ಧಾವನ್, ಭಾರತದಅಣ್ವಸ್ತ್ರ ಸಾಮಗ್ರಿಗಳ ಜನಕ ಬ್ರಹ್ಮಪ್ರಕಾಶ್ ಈ ಮೂವರು ಮಹಾನ್ ಚೇತನಗಳೊಂದಿಗೆ ದುಡಿದ ಕಲಾಂ ರುಇವರ ಶಿಸ್ತು, ದಕ್ಷತೆ, ಕಾರ್ಯವೈಖರಿ, ದೇಶಪ್ರೇಮ, ನಾಯಕತ್ವದ ಗುಣಗಳನ್ನು ಇನ್ನಷ್ಟು ಮೈಗೂಡಿಸಿಕೊಂಡರು.

ಭಾರತ ಕ್ಷಿಪಣಿ ಅಭಿವೃದ್ದಿ ಕಾರ್ಯಯೋಜನೆಗೆ ಕಲಾಂರನ್ನು ಮುಖ್ಯಸ್ಥರನ್ನಾಗಿ ನೇಮಿಸಿದ ನಂತರ ಭಾರತರಕ್ಷಣಾ ವ್ಯವಸ್ಥೆಯ ದಿಕ್ಕು ಬದಲಾಯಿತು. ನೆಲದಿಂದ ನೆಲಕ್ಕೆ ನಿಗದಿತ ಗುರಿಯತ್ತ ನೆಗೆಯುವ ಅಣ್ವಸ್ಥ್ರಗಳಂತಹ ಸಿಡಿತಲೆಗಳನ್ನು ಹೊತ್ತು ಆರ್ಭಟಿಸುತ್ತಾ ಶತ್ರು ಪಾಳ್ಯವನ್ನು ಧ್ವಂಸ ಮಾಡಬಲ್ಲ ಕ್ಷಿಪಣಿಗಳು ನಿರ್ಮಾಣವಾಯಿತು. ಕ್ಷಿಪಣಿಗಳಾದ ಪ್ರಥ್ವಿ, ಆಕಾಶ್, ನಾಗ್, ಅಗ್ನಿ, ತ್ರಿಶೂಲ್ ಗಳನ್ನು ನಿರ್ಮಿಸಿ, ಭಾರತದ ಕ್ಷಿಪಣಿಗಳ ಪಿತಾಮಹಾ ನೆಂದು ಕಲಾಂರನ್ನುದೇಶ ಹೆಮ್ಮೆಯಿಂದಕೊಂಡಾಡಿದೆ.

24 ವರ್ಷಗಳ ಸುದೀರ್ಘ ಸಹನೆಯ ನಂತರ 1998 ಮೇ 11 ರಂದು ಪೊಕ್ರಾನ್ ನಲ್ಲಿ 2ನೇ ಬಾರಿಗೆಅಣ್ವಸ್ತ್ರ ಪ್ರಯೋಗಾರ್ಥ ಸ್ಪೋಟಕ ನಡೆಸಿ, ಅಣ್ವಸ್ತ್ರ ರಾಷ್ಟ್ರಗಳ ಸಾಲಿಗೆ ಭಾರತ ಸೇರ್ಪಡೆಯಾಯಿತು. ದೇಶದ ಹೆಮ್ಮೆಯ ಮಗ ಅಪ್ರತಿಮ ಸಾಧಕ ಮಹಾನ್ ವಿಜ್ನಾನಿ ಮೊದಲ ಬಾರಿಗೆ ಭಾರತದ ರಾಷ್ಟ್ರಪತಿಯಾಗಿದ್ದು, ದೇಶದ ಭಾಗ್ಯ, ವಿಶ್ವದಲ್ಲಿ ವಿಶೇಷ ತಂತ್ರಜ್ನಾನ ಪಡೆದಿರುವ ಭಾರತ ಧನ್ಯ. ದೇಶದ ಯಾವುದೇ ಭಾಗದಲ್ಲಿ ಮಕ್ಕಳ ಕಾರ್ಯಕ್ರಮವಿದ್ದರೆ, ಅಲ್ಲಿ ತೆರಳಿ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಮುಂದಿನ ಭವಿಷ್ಯದ ತಂತ್ರಜ್ನಾನ್ ಶಿಲ್ಪಿಗಳಾಗಿ ದೇಶಭಿಮಾನಿಗಳಾಗಿ ರೂಪಿಸಿಕೊಳ್ಳುವಂತೆ ಮಕ್ಕಳಲ್ಲಿ ಅತ್ಮವಿಶ್ವಾಸ ತುಂಬುತ್ತಿರುವ 78ರ ಹರೆಯದ ಹಸನ್ಮುಖಿ ಕಲಾಂ ನಮ್ಮೆಲ್ಲರ ಮುಂದಿರುವದೇಶದ ಆಸ್ಥಿ.

ಕಲಾಂ ವಿಶ್ವಕ್ಕೆ ಸಾಹಿತ್ಯದಮೂಲಕ ನೀಡಿದ ಕೊಡುಗೆ, “ವಿಂಗ್ಸ್‍ಆಪ್ ಫಯರ್ “, ಇಂಡಿಯಾ 20-20 ಎ ವಿಶನ್ ಪಾರ್ ದಿ ನ್ಯೂ ಮಿಲ್ಲೆನ್ನಿಯಂ”, “ಮೈ ಜರ್ನಿ”, “ಇಗ್ನೆಟೆಡ್ ಮೈಂಡ್ಸ್‍ಆನ್ ಲೀಸಿಂಗ್ ಪವರ್ ವಿತ್‍ಇನ್ ಇಂಡಿಯಾ” ಗ್ರಂಥಗಳು ಮುಂದಿನ ಪೀಳಿಗೆಗೆ ಸಂಶೊಧನಾ ಗ್ರಂಥಗಳಾಗಿವೆ.

ಭಾರತೀಯರು ತಿಳಿದುಕೊಳ್ಳಬೇಕಾದ 5 ಸತ್ಯಗಳು

1. 1988ರ ಭಾರತದ ಅಣುಅಸ್ತ್ರ ಪರೀಕ್ಷೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು ಅಬ್ದುಲ್ ಕಲಾಂ. ಈ ಐತಿಹಾಸಿಕ ಸಾಧನೆಯಿಂದ ಏಕಾಏಕಿ ಪ್ರಸಿದ್ದರಾದ ಮಹಾನ್ ವಿಜ್ಞಾನಿ ಅಬ್ದುಲ್ ಕಲಾಂ.
2. ರಾಷ್ಟ್ರಪತಿ ಆಗುವುದಕಿಂತ ಮುನ್ನ ಸರ್ಕಾರಿ ಸಂಸ್ಥೆಗಳಾದ ಡಿ ಆರ್ ಡಿ ಓ ಮತ್ತು ಇಸ್ರೊದಲ್ಲಿ ಏರೊಸ್ಪೇಸ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಅಬ್ದುಲ್ ಕಲಾಂ ಅಲ್ಲಿ ಅತ್ಯಾಧುನಿಕ ಕ್ಷಿಪಣಿ ಮತ್ತು ಉಡ್ಡಯನ ವಾಹನವನ್ನು ಅಭಿವೃದ್ಧಿಪಡಿಸಿದ್ದರು. ಹಿಗಾಗಿಯೇ ಅಬ್ದುಲ್ ಕಲಾಂ “ಮಿಸೈಲ್ ಮ್ಯಾನ್” ಎಂದೇ ಖ್ಯಾತರಾಗಿದ್ದರು.
3. ಶಾಲಾ ದಿನಗಳಲ್ಲಿ ಅಬ್ದುಲ್ ಕಲಾಂ ಅತ್ಯಂತ ಬುದ್ದಿವಂತ ವಿದ್ಯಾರ್ಥಿಆಗಿರಲಿಲ್ಲ
4. ಶಾಲೆ ಮುಗಿದ ಬಳಿಕ ನ್ಯೂಸ್ ಪೇಪರ್ ಮಾರಾಟ ಮಾಡಿ ಬಂದ ಹಣವನ್ನು ತಂದೆಗೆ ನೀಡಿ ಅವರ ಖರ್ಚಿನ ಭಾರ ತಗ್ಗಿಸುತ್ತಿದ್ದ ಬಾಲಕ ಅಬ್ದುಲ್ ಕಲಾಂ.
5. 1998ರಲ್ಲಿ ಹೃದಯತಜ್ಞ ಸೋಮರಾಜುರವರ ಸಹಕಾರ ಪಡೆದು ಕಡಿಮೆ ಖರ್ಚಿನಕರೋನರಿ ಸ್ಟೆಂಟ್ (ಹೃದಯದ ರಕ್ತನಾಳಗಳಲ್ಲಿ ಉಂಟಾಗುವ ಬ್ಲಾಕೇಜ್ ನಿವಾರಣೆಗೆ ಬಳಸುವ ಉಪಕರಣ) ಅನ್ನು ಅಭಿವೃದ್ಧಿ ಪಡಿಸಿದ ಸಾಧನೆ ಅಬ್ದುಲ್ ಕಲಾಂ ಅವರದ್ದು, ಜೊತೆಗೆ ಇಬ್ಬರೂ ಸೇರಿ ಆರೋಗ್ಯ ತಪಾಸಣೆ ನಡೆಸಬಲ್ಲ ಸುಲಭ ಸಾಧನ ಟ್ಯಾಬ್ಲೆಟ್ ಪಿಸಿಯನ್ನು ಅಭಿವೃದ್ಧಿ ಪಡಿಸಿದ್ದರು. ಈ ಟ್ಯಾಬ್ಲೆಟ್ ಗೆ ಕಲಾಮ್ – ರಾಜು ಟ್ಯಾಬ್ಲೆಟ್ ಎಂದೇ ಹೆಸರು ನೀಡಲಾಗಿದೆ.

ವಿಶ್ವದ ವಿವಿಧ 30 ವಿಶ್ವ ವಿಧ್ಯಾಲಯಗಳಿಂದ ಗೌರವ ಡಾಕ್ಟರೇಟ್, 1981 ರಲ್ಲಿ ಪದ್ಮಭೂಷಣ. 1990 ರಲ್ಲಿ ಪದ್ಮವಿಭೂಷಣ, 1997 ರಲ್ಲಿ ಭಾರತರತ್ನ ಪಡೆದಿರುವ ಡಾ.ಎ. ಪಿ.ಜೆ. ಅಬ್ದುಲ್ ಕಲಾಂರಿಗೆ, ವಿಶ್ವ ಭಾರತೀಯರ ಗೌರವಪೂರ್ವಕ ಅಂತಿಮ ನಮನಗಳು

Leave a Reply

Please enter your comment!

The opinions, views, and thoughts expressed by the readers and those providing comments are theirs alone and do not reflect the opinions of www.mangalorean.com or any employee thereof. www.mangalorean.com is not responsible for the accuracy of any of the information supplied by the readers. Responsibility for the content of comments belongs to the commenter alone.  

We request the readers to refrain from posting defamatory, inflammatory comments and not indulge in personal attacks. However, it is obligatory on the part of www.mangalorean.com to provide the IP address and other details of senders of such comments to the concerned authorities upon their request.

Hence we request all our readers to help us to delete comments that do not follow these guidelines by informing us at  info@mangalorean.com. Lets work together to keep the comments clean and worthful, thereby make a difference in the community.

Please enter your name here