ವೆನ್ಲಾಕ್ ಆಸ್ಪತ್ರೆಯಲ್ಲಿ ಆಯುರ್ವೇದ, ಹೋಮಿಯೋಪತಿ ಸ್ಪೆಷಾಲಿಟಿ ಕ್ಲಿನಿಕ್ ಪ್ರಾರಂಭ

ವೆನ್ಲಾಕ್ ಆಸ್ಪತ್ರೆಯಲ್ಲಿ ಆಯುರ್ವೇದ, ಹೋಮಿಯೋಪತಿ ಸ್ಪೆಷಾಲಿಟಿ ಕ್ಲಿನಿಕ್ ಪ್ರಾರಂಭ

ಮ0ಗಳೂರು: ಭಾರತೀಯ ವೈದ್ಯಪದ್ಧತಿಗಳು ಮತ್ತು ಹೋಮಿಯೋಪತಿ (ಆಯುಷ್) ಪದ್ಧತಿಗಳನ್ನು ಪ್ರಧಾನವಾಹಿನಿಗೆ ತಂದು ಸಾರ್ವಜನಿಕರಿಗೆ ಅವುಗಳ ಸಂಪೂರ್ಣ ಪ್ರಯೋಜನವನ್ನು ತಲುಪಿಸುವ ಸರಕಾರದ ಕಾರ್ಯಕ್ರಮದನ್ವಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದರಿಂದಾಗಿ ಆಯುಷ್ ಪದ್ಧತಿಗಳ ಬಗ್ಗೆ ಜನರು ಹೆಚ್ಚಿನ ಒಲವು ವ್ಯಕ್ತಪಡಿಸುತ್ತಿದ್ದು ವೆನ್ಲಾಕ್ ಆಸ್ಪತ್ರೆಯಲ್ಲಿ ಆಯುಷ್ ಸ್ಪೆಷಾಲಿಟಿ ಕ್ಲಿನಿಕ್ ತೆರೆಯಬೇಕೆಂಬ ಬೇಡಿಕೆ ಅಧಿಕವಾಗಿದೆ.
ಸಾರ್ವಜನಿಕರ ಆಶೋತ್ತರಗಳಿಗೆ ಸ್ಪಂದಿಸಿ ಸರಕಾರವು 2015-16ನೇ ಸಾಲಿನಲ್ಲಿ 50 ಹಾಸಿಗೆಗಳ ಆಯುಷ್ ಸಂಯುಕ್ತ ಆಸ್ಪತ್ರೆಯನ್ನು ತೆರೆಯಲು ಮಂಜೂರಾತಿ ನೀಡಿದೆ. ಅದರಂತೆ ಆಯುಷ್ ಇಲಾಖೆ ಮತ್ತು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಸಹಯೋಗದೊಂದಿಗೆ ಸ್ಪೆಷಾಲಿಟಿ ಕ್ಲಿನಿಕ್‍ಗಳನ್ನು ಈಗಾಗಲೇ ಪ್ರಾರಂಭಿಸಲಾಗಿದೆ.
ಜನರಿಗೆ ಹೆಚ್ಚಿನ ಆಯುಷ್ ಆರೋಗ್ಯ ಸೇವೆ ಒದಗಿಸುವ ದೃಷ್ಟಿಯಿಂದ ಖಾಸಗಿ ಆಯುಷ್ ಕಾಲೇಜುಗಳಾದ ಫಾಧರ್‍ಮುಲ್ಲರ್ಸ್ ಹೋಮಿಯೋಪತಿ ಮೆಡಿಕಲ್ ಕಾಲೇಜು, ದೇರಳಕಟ್ಟೆ ಇವರ ವತಿಯಿಂದ ಹೋಮಿಯೋಪತಿ ತಜ್ಞ ವೈದ್ಯರಿಂದ ವಿಶೇಷ ಚಿಕಿತ್ಸಾ ವಿಭಾಗಗಳಾದ ಸ್ತ್ರೀರೋಗ, ಮಕ್ಕಳ ವಿಭಾಗ, ವೈದ್ಯಕೀಯ ಮತ್ತು ನರರೋಗ ವಿಭಾಗ ಪ್ರಾರಂಭಗೊಂಡಿರುತ್ತದೆ. ಹಾಗೂ ಕರ್ನಾಟಕ ಆಯುರ್ವೇದ ಮೆಡಿಕಲ್ ಕಾಲೇಜು, ಅಶೋಕನಗರ, ಮಂಗಳೂರು ಇವರ ವತಿಯಿಂದ ಆಯುರ್ವೇದ ವಿಶೇಷ ಚಿಕಿತ್ಸಾ ವಿಭಾಗಗಳಾದ ಪಂಚಕರ್ಮ, ಕಾಯ ಚಿಕಿತ್ಸಾ, ಚರ್ಮ ರೋಗ, ನರರೋಗ, ಮೂಳೆ ಮತ್ತು ಸಂಧಿ ರೋಗ, ಶಾಲಾಕ್ಯ (ಇಓಖಿ), ಶಲ್ಯ ಚಿಕಿತ್ಸಾ (ಕ್ಷಾರಸೂತ್ರ) ವಿಭಾಗಗಳನ್ನು ತೆರೆಯಲಾಗಿದ್ದು, ತಜ್ಞ ವೈದ್ಯರ ಸಹಕಾರದೊಂದಿಗೆ ಸೇವೆ ಲಭ್ಯವಾಗಲಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆಯುವಂತೆ ಕೋರಲಾಗಿದೆ.

Leave a Reply

Please enter your comment!
Please enter your name here