ಶಕುಂತಲಾ ಕಿಣಿ ಅಪರೂಪದ ಉದ್ಘೋಷಕಿ-ಡಾ.ಕೇದಿಗೆ ಅರವಿಂದ ರಾವ್

ಮಂಗಳೂರು: ಶಕುಂತಲಾ ಕಿಣಿಯವರು ಕೇವಲ ತಮ್ಮ ಕಾರ್ಯಕ್ಷೇತ್ರಕ್ಕೆ ಸೀಮಿತವಾಗಿರದೇ, ಸಾಹಿತ್ಯ ಮತ್ತು ಸಂಸ್ಕøತಿಯನ್ನು ಮೈಗೂಡಿಸಿಕೊಂಡು ಸೇವೆ ಸಲ್ಲಿಸುವ ಮೂಲಕ ಜನಾನುರಾಗಿಯಾಗಿದ್ದಾರೆ ಎಂದು ಕೇದಿಗೆ ಪ್ರತಿಷ್ಠಾನದ ಅಧ್ಯಕ್ಷ ಡಾ.ಕೇದಿಗೆ ಅರವಿಂದ ರಾವ್ ಹೇಳಿದರು.

Sanmana-shakunthala-kini

ಅವರು ಮಂಗಳೂರಿನ ಲಯನ್ಸ್ ಸೇವಾ ಮಂದಿರದಲ್ಲಿ ಅರೆಹೊಳೆ ಪ್ರತಿಷ್ಠಾನ ಮತ್ತು ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ ಆಯೋಜಿಸಿದ್ದ ಶಕುಂತಲಾ ಕಿಣಿ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತಾಡುತ್ತಿದ್ದರು.ಮೂವತ್ತೈದು ವರ್ಷಗಳ ಕಾಲ ಆಕಾಶವಾಣಿಯಲ್ಲಿ ಅವರು ಸಲ್ಲಿಸಿದ ಸೇವೆ ಅನನ್ಯ ಎಂದ ಅವರು, ಅವರ ಸ್ವರದಿಂದ ನಾವಿನ್ನು ವಂಚಿತರಾಗುತ್ತಿದ್ದೇವೆ ಎಂದರು.
ರೇಡಿಯೋ ಕೇಳುಗರ ಸಂಘದ ಅಧ್ಯಕ್ಷ ಯು ರಾಮರಾವ್ ಅಭಿನಂದನಾ ಮಾತಾಡುತ್ತಾ, ಎಂದು ಉದ್ಘೋಷಣೆಯ ನಡುವ ತಪ್ಪಿ, ನಂತರ ‘ಕ್ಷಮಿಸಿ’ಎಂಬ ಪದಪ್ರಯೋಗ ಮಾಡದ ಏಕೈಕ ಉದ್ಘೋಷಕಿಯಾಗಿ ಶಕುಂತಲಾ ಕಿಣಿ ಕೇಳೂಗರ ಮನ ಗೆದ್ದ ಸಾಧಕಿ ಎಂದರು.
ಧರ್ಮದರ್ಶಿ ಹರಿಕೃಷ್ಣ ಪುನರೂರು ಶಕುಂತಲಾ ಕಿಣಿ ದಂಪತಿಗಳನ್ನು ಅಭಿನಂದಿಸಿದರು. ಸಂಮಾನ ಸ್ವೀಕರಿಸಿ ಮಾತಾಡಿದ ಶಕುಂತಲಾ ಕಿಣಿ, ಆಕಾಶವಾಣಿ ಮತ್ತು ಮಹಿಳೆ ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದರು. ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಎನ್ ಸುಬ್ರಾಯ ಭಟ್, ಯು ರಾಘವೇಂದ್ರ ಕಿಣಿ ಉಪಸ್ಥಿತರಿದ್ದರು. ಅರೆಹೊಳೆ ಸದಾಶಿವ ರಾವ್ ಸ್ವಾಗತಿಸಿ, ಸುಬ್ರಾಯ ಭಟ್ ವಂದಿಸಿದರು. ಕಾಸರಗೋಡು ಅಶೋಕ ಕುಮಾರ್ ನಿರೂಪಣೆ ಮಾಡಿದರು.

Leave a Reply