ಶನಿವಾರ ಉಡುಪಿ ಪ್ರೀಮಿಯರ್ ಲೀಗ್”(ಯುಪಿಎಲ್) ಟ್ರೋಫಿ ಅನಾವರಣ

ಉಡುಪಿ: ಉಡುಪಿ ಕ್ರಿಕೆಟ್ ಕ್ಲಬ್ ವತಿಯಿಂದ ಎಪ್ರಿಲ್ 26 ರಿಂದ ಮೇ 1 ವರೆಗೆ ಅಂತಾರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಹಾರ್ಡ್ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದ ಉಡುಪಿ ಪ್ರೀಮಿಯರ್ ಲೀಗ್”(ಯುಪಿಎಲ್) ಟ್ರೋಫಿ ಅನಾವರಣ ಶನಿವಾರ ಸಂಜೆ 6.30ಕ್ಕೆ ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜ್(ಎಮ್.ಜಿ.ಎಮ್.) ಮೈದಾನದಲ್ಲಿ ನಡೆಯಲಿದೆ.ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ನಂತರ ಕಡೆಕರ್‍ನ ಸ್ಮಾರ್ಟ್ ಗೈಸ್ ತಂಡದವರಿಂದ ಫಿಲ್ಮ್ ಡ್ಯಾನ್ಸ್ ಕಾರ್ಯಕ್ರಮ ನಡೆಯಲಿದೆ.
ಪಂದ್ಯಾಟದಲ್ಲಿ ಸುಮಾರು 10 ತಂಡಗಳು ಕೊಲ್ಲಿ ರಾಷ್ಟ್ರದಿಂದ ಭಾಗವಹಿಸಲಿದೆ, ಅಲ್ಲದೆ ನೆರೆಯ ರಾಜ್ಯಾದ ಕೇರಳ, ಆಂಧ್ರಪ್ರದೇಶ, ಗೋವಾ, ಮುಂಬಾಯಿ ಹೀಗೆ ಬೇರೆ ಬೇರೆ ರಾಜ್ಯಗಳಿಂದ 20 ತಂಡಗಳು ಭಾಗವಹಿಸಲಿದೆ.
ಇದೇ ಪ್ರಥಮ ಬಾರಿಗೆ ದಾಖಲೆ ಎಂಬಂತೆ ” ಟಿ10 ಹಾರ್ಡ್ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನ್‍ಮೆಂಟ್” ಪಂದ್ಯದಲ್ಲಿ ವಿಜೇತ ತಂಡಕ್ಕೆ ವಿಶೇಷ ಮೊತ್ತದ ನಗದು ಬಹುಮಾನವನ್ನು ನಿಗದಿಪಡಿಸಿದೆ.
ಪ್ರಥಮ ವಿಜೇತ ತಂಡಕ್ಕೆ ರೂ. 20,00,000 ಲಕ್ಷ ನಗದು ಮತ್ತು ಟ್ರೋಫಿ, ದ್ವಿತೀಯ ಬಹುಮಾನವಾಗಿ ರೂ. 10,00,000 ಲಕ್ಷ ಮತ್ತು ಟ್ರೋಪಿ ಹಾಗೂ ಸೆಮಿ ಫೈನಲ್ ವಿಜೇತ ತಂಡಗಳಿಗೆ ರೂ. 2,00,000 ನೀಡಲಾಗುವುದು.
ಸರಣಿ ಶ್ರೇಷ್ಠ ಕಾರು, ಉತ್ತಮ ದಾಂಡಿಗನಿಗೆ ಬೈಕ್, ಉತ್ತಮ ಬೌಲರ್‍ಗೆ ಬೈಕ್, ಪಂದ್ಯ ಶ್ರೇಷ್ಠನಿಗೆ, ಉತ್ತಮ ಕ್ಷೇತ್ರ ರಕ್ಷಕ, ಅತೀ ಹೆಚ್ಚು ಸಿಕ್ಸರ್ ಗಳಿಸಿದ ಆಟಗಾರನಿಗೆ ವೈಯಕ್ತಿಕ ಬಹುಮಾನ ನೀಡಲಾಗುವುದು.

Leave a Reply