‘ಶಾಂತಿ ಮತ್ತು ಮಾನವೀಯತೆ’ ಪದವಿ ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆ

‘ಶಾಂತಿ ಮತ್ತು ಮಾನವೀಯತೆ’ ಪದವಿ ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆ

ಮಂಗಳೂರು: ರಾಷ್ಟ್ರ ಮಟ್ಟದಲ್ಲಿ ನಡೆಯುತ್ತಿರುವ ‘ಶಾಂತಿ ಮತ್ತು ಮಾನವೀಯತೆ’ ಅಭಿಯಾನದ ಅಂಗವಾಗಿ, ಅಭಿಯಾನದ ದ.ಕ. ಜಿಲ್ಲಾ ಸ್ವಾಗತ ಸಮಿತಿಯು ದ.ಕ. ಜಿಲ್ಲೆಯ ಪದವಿ ಪೂರ್ವ ಮತ್ತು ಪದವಿ ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಹಮ್ಮಿಕೊಂಡಿದೆ. ಪದವಿ ಪೂರ್ವ ವಿದ್ಯಾರ್ಥಿಗಳಿಗೆ “ಶಾಂತಿ ಮತ್ತು ಮಾನವೀಯತೆ-ಸವಾಲುಗಳು ಮತ್ತು ಪರಿಹಾರ” ಹಾಗೂ ಪದವಿ ಮತ್ತು ಸ್ನಾತ್ತಕೋತ್ತರ ಪದವಿ ವಿದ್ಯಾರ್ಥಿಗಳಿಗೆ “ಬಹುಸಂಸ್ಕøತಿಯ ಸಮಾಜದಲ್ಲಿ ಶಾಂತಿ ಮತ್ತು ಮಾನವೀಯತೆಯನ್ನು ಬಲ ಪಡಿಸುವುದು ಹೇಗೆ?” ಎಂಬುದು ಪ್ರಬಂಧದ ಚರ್ಚಾ ವಿಷಯವಾಗಿರುತ್ತದೆ.

ಪದವಿ ಪೂರ್ವ ಮತ್ತು ಪದವಿ ವಿಭಾಗಗಳಿಗೆ ತಲಾ ರೂ. 5000, ರೂ. 3000 ಹಾಗೂ ರೂ. 2000 ಕ್ರಮವಾಗಿ ಮೊದಲ, ಎರಡನೇಯ ಮತ್ತು ಮೂgನೇಯ ನಗದು ಬಹುಮಾನವಿದ್ದು, ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೂ ಪ್ರಮಾಣ ಪತ್ರ ನೀಡಲಾಗುವುದು. ಪ್ರಬಂಧವು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿರಬಹುದು. ಪದವಿ ಪೂರ್ವ ವಿದ್ಯಾರ್ಥಿಗಳ ಪ್ರಬಂಧವು ಫುಲ್ ಸ್ಕೇಪ್ ಕಾಗದದ 3 ಪುಟ ಹಾಗೂ ಪದವಿ ವಿದ್ಯಾರ್ಥಿಗಳ ಪ್ರಬಂಧವು 4 ಪುಟಗಳನ್ನು ಮೀರಬಾರದು.

ಸ್ಪರ್ಧೆಯಲ್ಲಿ ಭಾಗವಹಿಸುವ ಆಸಕ್ತ ವಿದ್ಯಾರ್ಥಿಗಳು ತಮ್ಮ ಪ್ರಬಂಧವನ್ನು ಕಾಲೇಜಿನ ಪ್ರಾಂಶುಪಾಲರ ಸಹಿ ಮತ್ತು ಮೊಹರಿನೊಂದಿಗೆ ದೃಡೀಕರಿಸಿ, ಲಕೋಟೆಯ ಮೇಲೆ ತಾಲೂಕಿನ ಹೆಸರು ಮತ್ತು ವಿಭಾಗವನ್ನು ದಪ್ಪ ಅಕ್ಷರಗಳಲ್ಲಿ ಬರೆದು, ಸೆ. 14ರ ಒಳಗೆ ತಲಪುವಂತೆ ಪ್ರಬಂಧ ಸ್ಪರ್ಧಾ ವಿಭಾಗ, ಶಾಂತಿ ಮತ್ತು ಮಾನವೀಯತೆ ಅಭಿಯಾನ, ಹಿದಾಯತ್ ಸೆಂಟರ್, ಬೀಬಿ ಅಲಾಬಿ ರಸ್ತೆ, ಮಂಗಳೂರು – 575001 ದೂ. ಸಂಖ್ಯೆ 9845054191ಗೆ ಕಳುಹಿಸಬೇಕು ಎಂದು ಅಭಿಯಾನÀ ಸ್ವಾಗತ ಸಮಿತಿಯ ಅಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply