ಶಾರ್ಜಾ: ಗಣೇಶ್ ರೈ ಅವರಿಗೆ “ವಿಶ್ವ ಮಾನ್ಯ ಪ್ರಶಸ್ತಿ” ನವೆಂಬರ್ 20 ರಂದು ವಿತರಣೆ

ಶಾರ್ಜಾ ಕರ್ನಾಟಕ ಸಂಘ ಮತ್ತು ಹೃದಯವಾಹಿನಿ ಕರ್ನಾಟಕ ವಿಶ್ವ ಕನ್ನಡ ಸಂಸ್ಕೃತಿ ಸಮಿತಿಯ ಆಶ್ರಯದಲ್ಲಿ ಶಾರ್ಜಾದಲ್ಲಿ 20 ನವೆಂಬರ್ 2015 ರಂದು ಅದ್ಧೂರಿಯಾಗಿ ನಡೆಯಲಿರುವ 12ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ಗಣೇಶ್ ರೈಯವರ ನಾಲ್ಕು ದಶಕಗಳಲ್ಲಿ ತಮ್ಮ ತಾಯಿನಾಡಿನಲ್ಲಿ ಮತ್ತು ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಸಲ್ಲಿಸಿರುವ ಕನ್ನಡ ಭಾಷೆ, ಕಲೆ, ಸಾಹಿತ್ಯ, ಸಂಸ್ಕೃತಿ, ಸಮಾಜ ಸೇವೆಯನ್ನು ಗುರುತಿಸಿ “ವಿಶ್ವ ಮಾನ್ಯ ಪ್ರಶಸ್ತಿ” ನೀಡಿ ಗೌರವಿಸಲಿದ್ದಾರೆ. ” ವಿಶ್ವ ಮಾನ್ಯ ಕನ್ನಡಿಗ”ದ  ಇನ್ನೊಂದು ಗರಿ ರೈಯವರ ಕೀರಿಟಕ್ಕೆ ಹಚ್ಚುತ್ತಿದೆ.

01-Ganesh-Rai-award-20151118 02-Ganesh-Rai-award-20151118-001 03-Ganesh-Rai-award-20151118-002 04-Ganesh-Rai-award-20151118-003 05-Ganesh-Rai-award-20151118-004 06-Ganesh-Rai-award-20151118-005 07-Ganesh-Rai-award-20151118-006 08-Ganesh-Rai-award-20151118. Hegade Honoured Ganesh Rai 09-Ganesh-Rai-award-20151118-007 10-Ganesh-Rai-award-20151118-008 11-Ganesh-Rai-award-20151118-009 12-Ganesh-Rai-award-20151118-010 13-Ganesh-Rai-award-20151118-011 14-Ganesh-Rai-award-20151118-012

ಶ್ರೀಮತಿ ಮಂಜುಳಾ ಗಣೇಶ್ ರೈ ಇವರ ಧರ್ಮ ಪತ್ನಿ ಓರ್ವ ಯಶಸ್ವಿ ಪುರುಷನ ಹಿಂದಿರುವ ಶಕ್ತಿಯಾಗಿದ್ದಾರೆ. ಮಗ ಮೋನಿಶ್ ರೈ ಮಗಳು ಐಶ್ವರ್ಯ ರೈ ಸುಖಿ ದಾಂಪತ್ಯದಲ್ಲಿ ಅರಳಿದ ಮೊಗ್ಗುಗಳು. ಇಬ್ಬರು ಮಕ್ಕಳು ಮಾತಾ ಪಿತೃರಂತೆ ಅಪ್ಪಟ ಮಾತೃ ಭಾಷಾ ಅಭಿಮಾನಿಗಳು.  ಇಬ್ಬರೂ ಭರತನಾಟ್ಯ ಕಲಾವಿದರು,  ಮಗ ಸಿ. ಎ. ಅಂತಿಮ ವರ್ಷದಲ್ಲಿ  ವ್ಯಾಸಂಗದಲ್ಲಿದ್ದರೆ,  ಮಗಳು ಬಿ.ಬಿ.ಎ. ಪದವಿ ಮುಗಿಸಿ ಎಂ.ಬಿ.ಎ. ವ್ಯಾಸಂಗಕ್ಕೆ ಸಿದ್ದತೆ ಮಾಡುತ್ತಿದ್ದಾಳೆ.

ಡಾ| ಬಿ. ಆರ್. ಶೆಟ್ಟಿಯವರ ಎನ್. ಎಂ. ಸಿ. ಸಮೂಹ ಸಂಸ್ಥೆಯ ಅಧೀನದಲ್ಲಿರುವ ಗಲ್ಫ್ ಪಬ್ಲಿಕ್ ರಿಲೇಶನ್ಸ್ ಜಾಹಿರಾತು ಸಂಸ್ಥೆಯಲ್ಲಿ ಕ್ರಿಯಾತ್ಮಕ ಕಲಾ ನಿರ್ದೇಶಕರು, ವ್ಯವಸ್ಥಾಪಕರಾಗಿ ಸಲ್ಲಿಸುತ್ತಿದ್ದಾರೆ.

Leave a Reply

Please enter your comment!
Please enter your name here