ಶಾಲಾ ಬಸ್ಸು ಡಿಕ್ಕಿ ವಿದ್ಯಾರ್ಥಿನಿ ಸಾವು

ಬೆಳ್ತಂಗಡಿ : ಶಾಲೆಗೆ ತೆರಳಿದ್ದ ಐದು ವರ್ಷದ ವಿದ್ಯಾರ್ಥಿನಿಯೊಂದು ಶಾಲಾ ಬಸ್ಸು ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವನಪ್ಪಿದ ಘಟನೆ ಬೆಳ್ತಂಗಡಿಯ ಕಕ್ಕಿಂಜೆಯಲ್ಲಿ ಲ್ಲಿ ಗುರುವಾರ ಸಂಭವಿಸಿದೆ.

ಮೃತ ಮಗುವನ್ನು ಶಿವನಬೆಟ್ಟು ಚಾರ್ಮಾಡಿ ನಿವಾಸಿ ಅಹಮ್ಮದ್ ಕುಞ್ನಿ ಅವರ ಮಗು ತಾಹೀದಾ ಎಂದು ಗುರುತಿಸಲಾಗಿದೆ.

ಧರ್ಮಸ್ಥಳ ಪೋಲಿಸರ ಪ್ರಕಾರ ತೌಹೀದಾ ಕಾರುಣ್ಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿಯುತ್ತಿದ್ದು, ಸಂಜೆ ಶಾಲೆ ಬಿಟ್ಟ ಬಳಿಕ ಶಾಲಾ ಬಸ್ಸಿನಲ್ಲಿ ವಾಪಾಸಾಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಗುರುವಾರ ಸಂಜೆ ಸುಮಾರು 4.50 ರ ಸುಮಾರಿಗೆ ಬಸ್ಸಿನ ಚಾಲಕ ತೌಹಿದಾಳನ್ನು ಶಿವಬೆಟ್ಟುವಿನ ಬಳಿ ಬಸ್ಸಿನಿಂದ ಇಳಿಸಿದ್ದು, ಚಾಲಕ ಬಸ್ಸನ್ನು ರಿವರ್ಸ್ ತೆಗೆಯುತ್ತಿದ್ದ ವೇಳೆ ಬಸ್ಸಿನ ಹಿಂದೆ ಮಗು ಇರುವುದನ್ನು ಗಮನಿಸಿದೆ ಮಗುವಿಗೆ ಬಸ್ಸು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ತೀವ್ರ ಗಾಯಗೊಂಡ  ತೌಹೀದಾಳನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ದಿದ್ದು, ಸಂಜೆ 6 ಗಂಟೆಯ ಸುಮಾರಿಗೆ ಕೊನೆಯುಸಿರೆಳಿದ್ದಿದ್ದಾಳೆ,

ಧರ್ಮಸ್ಥಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply