ಶಾಲೆಗೊಂದು ವನ, ಮಕ್ಕಳ ಆರೋಗ್ಯಕ್ಕೆ ನವ ಚೈತನ್ಯ – ಡಾ. ಜೆನಿಕಾ ಡಿ’ಸೋಜ

ಮೂಡಬಿದಿರೆ: ಸ್ವಾಸ್ಧ್ಯ ರಕ್ಷಣಾ ಅಭಿಯಾನದ ಆರೋಗ್ಯ ಶಿಬಿರವನ್ನು ಆಳ್ವಾಸ್ ಆಯುರ್ವೇದ ಕಾಲೇಜಿನ ಮುಖ್ಯ ವೈದ್ಯಾಧಿಕಾರಿ ಡಾ. ಜೆನಿಕಾ ಡಿ’ಸೋಜ ಹಾಗು ಮೂಡಬಿದಿರೆ ಪುರಸಭೆಯ ಅಧ್ಯಕ್ಷರಾದ ಶ್ರೀಮತಿ ರೂಪ ಎಸ್ ಶೆಟ್ಟಿಯವರು ಔಷಧೀಯ ಸಸ್ಯಗಳಾದ ನೆಲ್ಲಿಕಾಯಿ ಮತ್ತು ಅಶೋಕದ ಗಿಡಗಳನ್ನು ಪ್ರಾಂತ್ಯದ ಸರಕಾರಿ ಪ್ರೌಢಶಾಲಾ ಆವರಣದಲ್ಲಿ ನೆಟ್ಟು ಸಾಂಕೇತಿಕವಾಗಿ ಉದ್ಘಾಟಿಸಿದರು.

1 2

 

ಬಳಿಕ ಮಾತನಾಡಿದ ಡಾ. ಜೆನಿಕಾ ಡಿ’ಸೋಜ, ಪ್ರಸಕ್ತ ದಿನಗಳಲ್ಲಿ ಪ್ರಾಥಮಿಕ ಹಾಗು ಪ್ರೌಢಶಾಲಾ ಹಂತದಲ್ಲಿ ವಿಧ್ಯಾರ್ಥಿಗಳು ತಮ್ಮ ಸುತ್ತಮುತ್ತಲಿನ ಗಿಡ ಮರಗಳ ಪರಿಚಯ ಮತ್ತು ಲಾಭವನ್ನೂ ಅರಿತರೆ ಪರಿಸರ ರಕ್ಷಣೆಯ ಕಾಯಕದಲ್ಲಿ ತೊಡಗಿಸಿಕೊಂಡಂತಾಗುವುದು. ಹಾಗೆಯೇ ಶಾಲೆಗೊಂದು ವನ ನಿರ್ಮಿಸಿಕೊಂಡರೆ ಮಕ್ಕಳ ಮೈಮನಸ್ಸು ನವಚೇತನ ಪಡೆದು ಪುಳಕಿತಗೊಳ್ಳುವುದು ಎಂದು ವಿವರಿಸಿದರು. ಶ್ರೀಮತಿ ರೂಪ ಎಸ್ ಶೆಟ್ಟಿಯವರು  ಕಾರ್ಯಕ್ರಮವನ್ನು ಆಯೋಜಿಸಿದ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ತಂಡವನ್ನು ಅಭಿನಂದಿಸಿದರು.

ಸರಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರಾಜಶ್ರೀ ಹಾಗು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶ್ರೀ ಸುರೇಶ್ ಪ್ರಭು ಅವರು ಉಪಸ್ಧಿತರಿದ್ದರು.

ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಆಸ್ಪತ್ರೆಯ ಬಾಲರೋಗ ಸ್ನಾತಕೋತ್ತರ ವಿಭಾಗದ ತಜ್ಞ ಡಾ. ಪ್ರಸನ್ನ ಕೇಶವ ಪ್ರಾಂತ್ಯದ ಶಾಲಾ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಮಾಹಿತಿ ಶಿಬಿರವನ್ನು ನಡೆಸಿಕೊಟ್ಟರು. ತಜ್ಞ ವೈದ್ಯರಾದ ಡಾ. ಸತೀಶ್ ಶಂಕರ್ ಮತ್ತು ಡಾ. ಮಧು ಇವರು ಆರೋಗ್ಯ ತಪಾಸಣೆಯಲ್ಲಿ ಸಹಕರಿಸಿದರು. 200 ಕ್ಕೂ ಹೆಚ್ಚು ಶಾಲಾ ಮಕ್ಕಳು ಮತ್ತು ಪೆÇೀಷಕರು ಆರೋಗ್ಯ ಶಿಬಿರದ ಪ್ರಯೋಜನ ಪಡೆದರು.

Leave a Reply