ಶಾಸಕ ಜೆ.ಆರ್.ಲೋಬೊ ನೇತ್ರತ್ವದಲ್ಲಿ ಸೆ.11ರಂದು ಉಚಿತ ವೈದ್ಯಕೀಯ ತಪಾಸಣಾ ಶಿಬಿರ

ಶಾಸಕ ಜೆ.ಆರ್.ಲೋಬೊ ನೇತ್ರತ್ವದಲ್ಲಿ ಸೆ.11ರಂದು ಉಚಿತ ವೈದ್ಯಕೀಯ ತಪಾಸಣಾ ಶಿಬಿರ

ಮಂಗಳೂರು:ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರ ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಸೆಪ್ಟಂಬರ್  11 ರಂದು ಶಾಸಕ ಜೆ.ಆರ್.ಲೋಬೊರವರ ನೇತೃತ್ವದಲ್ಲಿ ಹಾಗೂ ಕೆ ಎಂಸಿ ಆಸ್ಪತ್ರೆ, ರೆಡ್ ಕ್ರಾಸ್ ಸಂಸ್ಥೆ  ಮತ್ತು ಎ.ಜೆ.ಆಸ್ಪತ್ರ ಸಹಯೋಗದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬೊಕ್ಕಪಟ್ನದಲ್ಲಿ ಬೆಳಿಗ್ಗೆ 9  ಗಂಟೆಯಿಂದ ಮಾಧ್ಯಾಹ್ನ 12.30 ರವರೆಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ.

ಈ ಶಿಬಿರದಲ್ಲಿ ಉಚಿತ ದಂತ ವೈದ್ಯಕೀಯ ತಪಾಸಣಾ ಶಿಬಿರ, ಉಚಿತ ಮಲೇರಿಯ ತಪಾಸಣಾ ಶಿಬಿರ, ಮಹಿಳೆಯರಿಗಾಗಿ ಥೈರಾಯಿಡ್ ತಪಾಸಣಾ ಶಿಬಿರವನ್ನೂ ಸಂಘಟಿಸಲಾಗಿದೆ. ಸಿಬಿರದಲ್ಲಿ ಕಣ್ಣು, ಕಿವಿ, ಗಂಟಲು, ಮೂಳೆ, ಸ್ತ್ರೀರೋಗ, ಚರ್ಮ, ಸಾಮಾನ್ಯ ಕಾಯಿಲೆಗಳಿಗೆ ಪರೀಕ್ಷೆಯನ್ನು ನಡೆಸಲಾಗುವುದು. ಶಿಬಿರದಲ್ಲಿ ಅಗತ್ಯವುಳ್ಳವರಿಗೆ ಓದುವ ಕನ್ನಡಕವನ್ನು ಉಚಿತವಾಗಿ ನೀಡಲಾಗುವುದು, ಅಗತ್ಯವುಳ್ಳವರಿಗೆ ಔಷಧಿ ನೀಡಲಾಗುವುದು.

ಹೆಚ್ಚಿನ ವಿವರಗಳಿಗಾಗಿ ಲತಾ ಸಾಲ್ಯಾನ್ (ಮಹಾನಗರ ಪಾಲಿಕೆ ಸದಸ್ಯರು) –  9901660285, ಕಮಲಾಕ್ಷ ಸಾಲ್ಯಾನ್ (ವಾರ್ಡ್ ಅದ್ಯಕ್ಷರು)- 9448469869, ದೀಪಾಕ್  ಶ್ರೀಯಾನ್- 9448379479 ಅವರನ್ನು ಸಂಪರ್ಕಿಸುವಂತೆ ಕೋರಲಾಗಿದೆ

 

Leave a Reply

Please enter your comment!
Please enter your name here