ಶಾಸಕ ಸ್ಥಾನಕ್ಕೆ ಅಂಬರೀಷ್‌ ರಾಜೀನಾಮೆ

ಶಾಸಕ ಸ್ಥಾನಕ್ಕೆ ಅಂಬರೀಷ್‌ ರಾಜೀನಾಮೆ

ಬೆಂಗಳೂರು: ಸಚಿವ ಸ್ಥಾನದಿಂದ ಕೈಬಿಟ್ಟಿರುವುದಕ್ಕೆ ಅಸಮಾಧಾನಗೊಂಡು ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಶಾಸಕ ಅಂಬರೀಷ್‌ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಉಪ ಸಭಾಪತಿ ಶಿವಶಂಕರರೆಡ್ಡಿ ಅವರಿಗೆ ತಮ್ಮ ಆಪ್ತ ಕಾರ್ಯದರ್ಶಿ ಎಸ್‌.ಶ್ರೀನಿವಾಸ್ ಮೂಲಕ ರಾಜೀನಾಮೆ ಪತ್ರ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

ಆದರೆ ರಾಜೀನಾಮೆ ಪತ್ರ ಸ್ವೀಕಾರಕ್ಕೆ ಉಪಸಭಾಧ್ಯಕ್ಷ ಶಿವಶಂಕರ ರೆಡ್ಡಿ ನಿರಾಕರಿಸಿದ್ದಾರೆ. ಶಾಸಕರೇ ಖುದ್ದು ಆಗಮಿಸಿ ರಾಜೀನಾಮೆ ನೀಡಬೇಕು, ರಾಜೀನಾಮೆಗೆ ಸರಿಯಾದ ಕಾರಣ ಕೊಡಬೇಕು, ಆಪ್ತ ಸಹಾಯಕರ ಮೂಲಕ ಕಳುಹಿಸಿದರೆ ಅದು ಅಂಗೀಕರಿಸಲು ಆಗುವುದಿಲ್ಲ ಎಂದು ಅಂಬಿ ಆಪ್ತ ಸಹಾಯಕ ಶ್ರೀನಿವಾಸ್‍ಗೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಈ ಹಿಂದೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆಯ ರಾಜ್ಯ ಸಚಿವರಾಗಿದ್ದ ಅಂಬರೀಷ್ ಕಾವೇರಿ ಗಲಭೆ ವೇಳೆ 2007ರ ಫೆ.14ರಂದು ರಾಜೀನಾಮೆ ನೀಡಿದ್ದರು. ಸ್ಪೀಕರ್‍ಗೆ ನೀಡದೇ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದರು. ಆದರೆ 2 ವರ್ಷಗಳ ಕಾಲ ಅಂಬಿ ರಾಜೀನಾಮೆ ಅಂಗೀಕಾರವಾಗದೇ ತ್ರಿಶಂಕು ಸ್ಥಿತಿಯಲ್ಲಿತ್ತು.

Leave a Reply