ಶಿವಮೊಗ್ಗ/ಹೆಬ್ರಿ: ಆಗುಂಬೆ ಘಾಟಿಯಲ್ಲಿ ಕಡಬದ ವ್ಯಕ್ತಿ ಆತ್ಮಹತ್ಯೆಗೆ ಯತ್ನ

ಶಿವಮೊಗ್ಗ/ಹೆಬ್ರಿ: ಆಗುಂಬೆ ಘಾಟಿಯ ತಡೆಗೊಡೆಗೆ ಕಾರನ್ನು ಅಪ್ಪಳಿಸಿ ಕಡಬ ಮೂಲದ ವ್ಯಕ್ತಿಯೋರ್ವರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳವಾರ ಸಂಜೆ 7.30 ರ ಸುಮಾರಿಗೆ ಸಂಭವಿಸಿದೆ.
ಕಡಬ ಜಯಕರ್ನಾಟಕ ಸಂಘಟನೆಯ ವಲಯಾಧ್ಯಕ್ಷ ಕುಟ್ರುಪಾಡಿ ನಿವಾಸಿ ಸಿ ಕೆ ಜೋಸೇಫ್ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ.
ಪೋಲಿಸ್ ಮೂಲಗಳ ಪ್ರಕಾರ್ ಜೋಸೇಪ್ ತನ್ನ ಗೆಳೆಯರಾದ ನಾಸಿರ್ ಮತ್ತು ವಿಶ್ವನಾಥ್ ಎಂಬವರೊಂದಿಗೆ ಆಗುಂಬೆಗೆ ತೆರಳಿದ್ದು, ಅಲ್ಲಿ ಗೆಳೆಯರನ್ನು ಕೆಳಗಿಳಿಸಿ ಬಳಿಕ ತಾನು ಇಲ್ಲಿಯೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತನ್ನ ಸ್ನೇಹಿತರಲ್ಲಿ ತಿಳಿಸಿದ್ದಾರೆ. ಆವರನ್ನು ತಡೆಯಲು ಯತ್ನಿಸುವ ವೇಳೆಗಾಗಲೇ ಜೋಸೇಫ್ ತನ್ನ ಕಾರನ್ನು ಘಾಟಿಯ ಮೊದಲನೇ ತಿರುವಿನಲ್ಲಿ ತಡೆಗೊಡೆಗೆ ಡಿಕ್ಕಿ ಹೊಡೆದಿದ್ದು, ಕಾರು ಮೂರನೇ ತಿರುವಿನಲ್ಲಿ ಜಾರಿ ಬಿದ್ದಿದೆ. ಕೂಡಲೇ ಸ್ಥಳೀಯರು ಪೋಲಿಸರ ನೆರವಿನಿಂದ ಪ್ರಪಾತದ ಮರವೊಂದರಲ್ಲಿ ಸಿಲುಕಿಕೊಂಡಿದ್ದ ಜೋಸೆಫ್ ಅವರನ್ನು ಮೇಲಕ್ಕೆತ್ತಿ ಮಣಿಪಾಲದ ಆಸ್ಪತ್ರೆಗೆ ಸೇರಿಸಿದ್ದಾರೆ.
ಆಗುಂಬೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Please enter your comment!
Please enter your name here