ಶಿಶು ಆಹಾರ ಮಾರಾಟ ನಿಷೇಧ ಚಿಂತನೆ

ನವದೆಹಲಿ: ಮ್ಯಾಗಿ ನೂಡಲ್ಸ್ ವಿವಾದಕ್ಕೀಡಾಗಿರುವ ಬೆನ್ನಲ್ಲೆ, ಫಾರ್ಮಾಸ್ಯುಟಿಕಲ್  ಸಂಸ್ಥೆಯೂ ಶಿಶು ಆಹಾರಗಳು ಮತ್ತು ಸಪ್ಲಿಮೆಂಟ್‍ಗಳನ್ನು ನಿಷೇಧಿಸುವ ಕುರಿತು ಯೋಚಿಸಿದೆ. ಮೆಡಿಕಲ್ ಸ್ಟೋರ್‍ಗಳಲ್ಲಿ ಕೇವಲ ಔಷಧ, ಮಾತ್ರೆ, ಸಿರಪ್‍ಗಳನ್ನು ಮಾತ್ರ ಮಾರಾಟ ಮಾಡಲು ಅವಕಾಶ ನೀಡಬೇಕೆಂದು ಇಲಾಖೆ ಅಭಿಪ್ರಾಯ ವ್ಯಕ್ತಪಡಿಸಿದೆ.

“ಜನ ಶಿಶು ಆಹಾರಗಳು ಆರೋಗ್ಯಕ್ಕೆ ಉಪಯುಕ್ತ ಎಂಬ ಕಾರಣಕ್ಕೆ ಮೆಡಿಕಲ್ ಸ್ಟೋರ್‍ಗಳಿಂದ ಖರೀದಿ ಮಾಡುತ್ತಾರೆ. ಮುಂದೊಮ್ಮೆ ಮ್ಯಾಗಿ ಎದುರಿಸಿದ ಸಮಸ್ಯೆ ಇವುಗಳಿಗೂ ಆಗಬಹುದು. ಆದ್ದರಿಂದ ಸೆರಿಲ್ಯಾಕ್, ನೆಸ್ಟಮ್, ಬೇಬಿ ಸೋಪ್, ತೈಲಗಳು, ಇವುಗಳ ಮಾರಾಟವನ್ನೂ ನಿಷೇಧಿಸುವುದು ಸೂಕ್ತ” ಎಂದು ಕೇಂದ್ರ ಸಚಿವ ಹಂಸರಾಜ್ ಗಂಗಾರಾಮ್ ಆಹಿರ್ ಆತಂಕದ ಮಾತುಗಳನ್ನಾಡಿದ್ದಾರೆ.

ದೇಹದಾಢ್ರ್ಯಕ್ಕೆ ಬಳಸುವ ಪ್ರೋಟೀನ್ ಸಪ್ಲಿಮೆಂಟ್ ಗಳನ್ನೂ ಮಾರಾಟ ಮಾಡಕೂಡದೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Leave a Reply

Please enter your comment!
Please enter your name here