ಶ್ರೀಮತಿ ಶೆಟ್ಟಿ ಹತ್ಯೆ ಆರೋಪಿಗಳ ಬಂಧನ ಪೊಲೀಸ್ ಕಮೀಷನರ್ ಮತ್ತು ತಂಡಕ್ಕೆ ಶಾಸಕ ಕಾಮತ್ ಅಭಿನಂದನೆ

ಶ್ರೀಮತಿ ಶೆಟ್ಟಿ ಹತ್ಯೆ ಆರೋಪಿಗಳ ಬಂಧನ ಪೊಲೀಸ್ ಕಮೀಷನರ್ ಮತ್ತು ತಂಡಕ್ಕೆ ಶಾಸಕ ಕಾಮತ್ ಅಭಿನಂದನೆ

ಮಂಗಳೂರು : ಶ್ರೀಮತಿ ಶೆಟ್ಟಿಯವರನ್ನು ಅಮಾನುಷವಾಗಿ ಹತ್ಯೆಗೈದ ಆರೋಪಿಗಳನ್ನು ಕೊಲೆಯಾದ ಮೂರು ದಿನಗಳ ಒಳಗೆ ಪತ್ತೆ ಹಚ್ಚಿ ಬಂಧಿಸಿದ ದಕ್ಷ ಪೊಲೀಸ್ ಕಮೀಷನರ್ ಸಂದೀಪ್ ಪಾಟೀಲ್ ಮತ್ತು ಪೊಲೀಸ್ ತಂಡಕ್ಕೆ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅಭಿನಂದನೆ ಸಲ್ಲಿಸಿದ್ದಾರೆ.

ಮಂಗಳೂರು ನಗರದ ಜನತೆಯಲ್ಲಿ ತಲ್ಲಣ ಉಂಟು ಮಾಡಿದ ಹತ್ಯೆಯೊಂದನ್ನು ಮೂರೇ ದಿನಗಳ ಒಳಗೆ ಭೇದಿಸಿದ ಪೊಲೀಸ್ ಅಧಿಕಾರಿಗಳು ಪೊಲೀಸ್ ಇಲಾಖೆಯ ಮೇಲೆ ಇನ್ನಷ್ಟು ಗೌರವ ಹೆಚ್ಚಾಗುವಂತೆ ಮಾಡಿದ್ದಾರೆ. ಸಂದೀಪ್ ಪಾಟೀಲ್ ಅವರಂತಹ ಪೊಲೀಸ್ ಕಮೀಷನರ್ ಅವರು ಮಂಗಳೂರು ನಗರಕ್ಕೆ ಅವಶ್ಯಕವಾಗಿದ್ದು, ಅವರಿಂದ ಇನ್ನಷ್ಟು ಸೇವೆ ಮಂಗಳೂರು ಮಹಾನಗರದ ಜನರಿಗೆ ಸಿಗುವಂತಾಗಲಿ ಎಂದು ಶಾಸಕ ಕಾಮತ್ ಹಾರೈಸಿದ್ದಾರೆ