ಶ್ರೀಲಂಕಾ ಸರಣಿ ಬಾಂಬ್ ಸ್ಪೋಟ: ಮಂಗಳೂರಿನ ಮಹಿಳೆ ಸಾವು

493

ಶ್ರೀಲಂಕಾ ಸರಣಿ ಬಾಂಬ್ ಸ್ಪೋಟ: ಮಂಗಳೂರಿನ ಮಹಿಳೆ ಸಾವು

ಕೊಲಂಬೊ: ಶ್ರೀಲಂಕಾದಲ್ಲಿ ಸರಣಿ ಸ್ಫೋಟದಲ್ಲಿ ಮಂಗಳೂರಿನ ಬೈಕಂಪಾಡಿ ಮೂಲದ ಮಹಿಳೆ ಮೃತಪಟ್ಟಿದ್ದಾರೆ.

ಮಂಗಳೂರಿನ ಅಬ್ದುಲ್ ಕುಕ್ಕಾಡಿ ಎಂಬುವರ ಪತ್ನಿ ರಝೀನಾ ಖಾದರ್(58) ಮೃತ ದುರ್ದೈವಿ.

ಮುಂಬೈನಲ್ಲಿ ನೆಲಸಿದ್ದ ಅಬ್ದುಲ್ ಕುಟುಂಬ ಕೊಲಂಬೊದಲ್ಲಿದ್ದ ಸಂಬಂಧಿಕರನ್ನು ಭೇಟಿ ಮಾಡಲು ದಂಪತಿ ತೆರಳಿದ್ದರು. ಶಾಂಗ್ರಿಲಾ ಹೋಟೆಲ್ನಲ್ಲಿ ತಂಗಿದ್ದರು. ಅಬ್ದುಲ್ ಕುಕ್ಕಾಡಿ ಅವರು ಪತ್ನಿಯನ್ನು ಹೋಟೆಲ್ನಲ್ಲಿ ಬಿಟ್ಟು ಕೆಲಸದ ಮೇಲೆ ದುಬೈಗೆ ಹೋಗಿದ್ದರು. ಆದರೆ ಇಂದು ಹೋಟೆಲ್ನಲ್ಲಿ ನಡೆದ ಬಾಂಬ್ ಸ್ಪೋಟದಲ್ಲಿ ರಝೀನಾ ಮೃತಪಟ್ಟಿದ್ದಾರೆ.

1 Comment

Comments are closed.