ಸಮಾಜ ಸೇವಕರಿಗೆ ರೋಟರಿ ಮಲ್ಪೆ ಕೊಡವೂರು ವತಿಯಿಂದ ರೋಟರಿ ಪುರಸ್ಕಾರ್

95

ಸಮಾಜ ಸೇವಕರಿಗೆ ರೋಟರಿ ಮಲ್ಪೆ ಕೊಡವೂರು ವತಿಯಿಂದ ರೋಟರಿ ಪುರಸ್ಕಾರ್

ಉಡುಪಿ: ಸಮಾಜ ಸೇವೆಯನ್ನು ಧ್ಯೇಯವಾಗಿರಿಸಿಕೊಂಡ ಅಂತರಾಷ್ಟ್ರೀಯ ರೋಟರಿ ಸಂಸ್ಥೆಯಿಂದ ಸಮಾಜದಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಅಭಿನಂದಿಸುತ್ತಿದ್ದಾಗ ಅವರ ಜವಬ್ದಾರಿ ಹೆಚ್ಚುತ್ತದೆ ಅಲ್ಲದೆ ಇನ್ನಷ್ಟು ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳವ ಉತ್ಸಾಹ ಇಮ್ಮಡಿಗೊಳ್ಳುತ್ತದೆ ಎಂದು ರೋಟರಿ ಜಿಲ್ಲೆ 3180 ನಿಕಟಪೂರ್ವ ಕಾರ್ಯದರ್ಶಿ ಹೇಳಿದರು.

rotary-puraskar

ಅವರು ಕೊಡವೂರಿನ ಕ್ಷೀರಧಾಮ ಸಭಾಂಗಣದಲ್ಲಿ ಆಪತ್ಬಾಂಧವ ಶ್ರೀ ಸೂರಿ ಶೆಟ್ಟಿ ಕಾಪು, ರಕ್ತ ಕ್ರಾಂತಿಯ ಹರಿಕಾರ ಜಗದೀಶ ಅಮೀನ್ ಹಾಗು ಯುವ ಹೊರಾಟಗಾರ ರಾಮಾಂಜಿಯವರಿಗೆ ರೋಟರಿ ಪುರಸ್ಕಾರ ನೀಡಿ ಅಭಿನಂದಿಸಿ ಮಾತನಾಡುತ್ತಿದ್ದರು.

ಸನ್ಮಾನಿತರ ಪರವಾಗಿ ಮಾತನಾಡಿದ ಸೂರಿಶೆಟ್ಟ ಸಮಾಜದಲ್ಲಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡಿದಾಗ ಮನಸ್ಸಿಗೆ ಬಹಳ ಸಂತೋಷವಾಗುತ್ತದೆ. ಅದರಲ್ಲೂ ನಿರ್ಗತಿಕರ ಪರವಾಗಿ ನಾವು ಕೆಲಸ ಮಾಡಿದಾಗ ನಮ್ಮ ಜನ್ಮ ಪಾವನವಾಗುತ್ತದೆ ಎಂದರು. ಈ ಸಂದರ್ಭದಲ್ಲಿ ವೃತ್ತಿ ಸೇವೆಯಲ್ಲಿ ಸಾರ್ಥಕ 25ವರ್ಷಗಳನ್ನು ಪೂರೈಸಿದ ಮಹೇಶ್ ಕುಮಾರ್ ಇವರನ್ನು ಗೌರವಿಸಲಾಯಿತು.

ವಲಯ ಸೇನಾನಿ ರಾಮ ಪೂಜಾರಿ, ಕಾರ್ಯದರ್ಶಿ ಸುಂದರ ಪೂಜಾರಿ ಉಪಸ್ಥಿತರಿದ್ದರು. ರೋಟರಿ ಅಧ್ಯಕ್ಷ ಪ್ರಭಾತ್ ಕೋಟ್ಯಾನ್ ಸ್ವಾಗತಿಸಿದರು. ರಾಘವೇಂದ್ರ ಪ್ರಭು ಕರ್ವಾಲು ಪ್ರಸ್ತಾವಿಸಿದರು. ಸನ್ಮಾನಿತರನ್ನು ಜನಾರ್ದನ್ ಕೊಡವೂರು ಪರಿಚಯಿಸಿದರು. ಪೂರ್ಣಿಮಾ ಜನಾರ್ದನ್ ನಿರೂಪಿಸಿದರು. ಮಹೇಶ್ ಕುಮಾರ್.ಎಂ ಧನ್ಯವಾದವಿತ್ತರು. ಆಕಾಶ್ ಹೆಬ್ಬಾರ್ ಪ್ರಾರ್ಥಿಸಿದರು.