ಸರ್ಕಾರಿ ಸೇವೆಯಿಂದ ನಿವೃತ್ತಿ, ಬೀಳ್ಕೊಡುಗೆ

ಮಂಗಳೂರು : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮಂಗಳೂರು ಕಚೇರಿಯಲ್ಲಿ 30 ವರ್ಷಗಳಿಂದ ಬೆರಳಚ್ಚುಗಾರರಾಗಿ ಸೇವೆ ಸಲ್ಲಿಸಿ ಜೂನ್ 30 ರಂದು ಸರ್ಕಾರಿ ಸೇವೆಯಿಂದ ನಿವೃತ್ತರಾದ  ಎ.ಸಾವಿತ್ರಿ ಅವರನ್ನು ಅಧಿಕಾರಿಗಳು ಮತ್ತು ಕಚೇರಿ ಸಿಬ್ಬಂದಿಗಳು ಆತ್ಮೀಯವಾಗಿ ಬೀಳ್ಕೊಟ್ಟರು.

retire ಮ

ವಾರ್ತಾಧಿಕಾರಿ ಬಿ.ಎ.ಖಾದರ್ ಶಾ ಹಾಗೂ ಕಚೇರಿಯ ಸಿಬ್ಬಂದಿ ನೆನಪಿನ ಕಾಣಿಕೆ ನೀಡಿ ಬೀಳ್ಕೊಟ್ಟರು. ಈ ಸಂದರ್ಭದಲ್ಲಿ ವಾರ್ತಾ ಸಹಾಯಕ ಚಂದ್ರಶೇಕರ ಅಜಾದ್, ಕೃಷಿ ಇಲಾಖೆಯ ವ್ಯವಸ್ಥಾಪಕ ರಾಘವೇಂದ್ರ  ಅವರು ಸಾವಿತ್ರಿಯವರ ಸರ್ಕಾರಿ ಸೇವೆಯ ಕುರಿತು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ವಾರ್ತಾಧಿಕಾರಿ ಖಾದರ್ ಶಾ ಅವರು ಮಾತನಾಡಿ ಸಾವಿತ್ರಿಯವರು ಶೃದ್ದೆ ಪ್ರಾಮಾಣಿಕತೆಯಿಂದ ತಮ್ಮ ಸರ್ಕಾರಿ ಸೇವೆಯನ್ನು ಒಂದೇ ಕಚೇರಿಯಲ್ಲಿ 30 ವರ್ಷ ಪೂರೈಸಿರುವುದು ವಿಶೇಷವಾಗಿದೆ. ಅವರ ನಿವೃತ್ತಿ ಜೀವನವು ಸುಖಕರವಾಗಿರಲಿ ಎಂದು ಹಾರೈಸಿದರು.

ಪ್ರಾನ್ಸಿಸ್ ಲೂವಿಸ್ ಕಾರ್ಯಕ್ರಮ ನಿರೂಪಿಸಿದರು. ಪ್ರಥಮ ದರ್ಜೆ ಸಹಾಯಕಿ ಸೀಮಾ ವಂದಿಸಿದರು.

Leave a Reply