ಸಿಇಟಿ ಫಲಿತಾಂಶ ಪ್ರಕಟ- ವೈದ್ಯ ವಿಭಾಗದಲ್ಲಿ ಆಳ್ವಾಸ್ ನ ಜಿ. ಅನಂತ್‌ ಮೊದಲ ರ‍್ಯಾಂಕ್‌

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ಫಲಿತಾಂಶ ಶನಿವಾರ ಪ್ರಕಟವಾಗಿದೆ.

ವೈದ್ಯ ಮತ್ತು ದಂತವೈದ್ಯ ವಿಭಾಗದಲ್ಲಿ ಮೂಡಬಿದರೆಯ ಆಳ್ವಾಸ್ ಪಿಯು ಕಾಲೇಜು ವಿದ್ಯಾರ್ಥಿ ಜಿ. ಅನಂತ್‌ ಮೊದಲ ರ‍್ಯಾಂಕ್‌ ಪಡೆದಿದ್ದಾರೆ.

ಐಎಸ್‌ಎಂ ಮತ್ತು ಹೋಮಿಯೊಪತಿ ವಿಭಾಗದಲ್ಲಿ ಬೆಂಗಳೂರಿನ ಯಲಹಂಕದ ಶೇಷಾದ್ರಿಪುರ ಪಿಯು ಕಾಲೇಜಿನ ವಿದ್ಯಾರ್ಥಿ ಸಂಜಯ್‌ ಎಂ. ಗೌಡರ್‌ ಮೊದಲ ರ‍್ಯಾಂಕ್‌ ಗಳಿಸಿದ್ದಾರೆ.

ಎಂಜಿನಿಯರಿಂಗ್ ವಿಭಾಗದಲ್ಲಿ ಬೆಂಗಳೂರಿನ ವಿವಿಎಸ್ ಸರ್ದಾರ್ ಪಟೇಲ್ ಪಿಯು ಕಾಲೇಜು ವಿದ್ಯಾರ್ಥಿ ಮಿಲಿಂದ್ ಕುಮಾರ್ ಮೊದಲ ರ‍್ಯಾಂಕ್‌ ಪಡೆದಿದ್ದಾರೆ.

ವಾಸ್ತುಶಿಲ್ಪ ವಿಭಾಗದಲ್ಲಿ ಬೆಂಗಳೂರಿನ ಸಿಎಂಆರ್ ನ್ಯಾಷನಲ್‌ ಪಬ್ಲಿಕ್ ಶಾಲೆ ವಿದ್ಯಾರ್ಥಿನಿ ಮೃದುಲಾ ಸಿ.ಆರ್. ಮೊದಲ ಸ್ಥಾನದಲ್ಲಿದ್ದಾರೆ.

Leave a Reply