ಸಿಸಿಬಿಯಿಂದ ವಿವಿಧೆಡೆ ಮಟ್ಕ ಧಾಳಿ – ಬಂಧನ

ಸಿಸಿಬಿಯಿಂದ ವಿವಿಧೆಡೆ ಮಟ್ಕ ಧಾಳಿ – ಬಂಧನ

ಮಂಗಳೂರು: ನಗರದ ವಿವಿಧೆಡೆಯಲ್ಲಿ ಸಿಸಿಬಿ ಪೋಲಿಸರು ಧಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.

ನಗರದ ಪಂಪುವೆಲ್ ಬಳಿ ಇರುವ ಪದ್ಮಶ್ರೀ ಹೊಟೇಲ್ ನ ಬಳಿಯಲ್ಲಿ ಮಟ್ಕ ಆಟದಲ್ಲಿ ನಿರತರಾಗಿದ್ದಲ್ಲಿಗೆ ಸಿಸಿಬಿ ಪೊಲೀಸರು ಧಾಳಿ ಮಾಡಿ ಸಾರ್ವಜನಿಕರಿಂದ ಹಣವನ್ನು ಸಂಗ್ರಹ ಮಾಡುತ್ತಿದ್ದ ಉಜ್ಜೋಡಿ ನಿವಾಸಿ ರತನ್ ಕುಮಾರ್ (46) , ದಸ್ತಗಿರಿ ಮಾಡಿ ಆತನಿಂದ ಮಟ್ಕ ಆಟದಲ್ಲಿ ಸಂಗ್ರಹವಾಗಿದ್ದ ಒಟ್ಟು 51,030/- ರೂಪಾಯಿ, ಮಟ್ಕ ಚೀಟಿ, ಮತ್ತು ಸಿಬಿಝಡ್ ಮೋಟಾರು ಸೈಕಲ್ ನ್ನು ಸ್ವಾಧೀನಪಡಿಸಲಾಗಿದೆ. ಇದರ ಒಟ್ಟು ಬೆಲೆ 94,000/- ರೂಪಾಯಿ ಆಗಿರುತ್ತದೆ. ಆರೋಪಿಗಳನ್ನು ಮತ್ತು ಸೊತ್ತುಗಳನ್ನು ಮುಂದಿನ ಕಾನೂನು ಕ್ರಮದ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

ಅದೇ ರೀತಿ ಮಣ್ಣಗುಡ್ಡೆ ಗುರ್ಜಿ ಜಂಕ್ಷನ್ ಎದುರು ಮಟ್ಕ ಆಟ ಆಡುವಲ್ಲಿಗೆ ಧಾಳಿ ಮಾಡಿ ಅಲ್ಲಿ ಸಾರ್ವಜನಿಕರಿಂದ ಹಣವನ್ನು ಸಂಗ್ರಹ ಮಾಡುತ್ತಿದ್ದ
ಕಂಕನಾಡಿ ಕನಕರಬೆಟ್ಟು ನಿವಾಸಿ ಯತೀಶ್, ಪ್ರಾಯ (45), ಉರ್ವ ನಿವಾಸಿ ಸುರೇಶ್ ಪೂಜಾರಿ (44), ಕಂಕನಾಡಿ ನಿವಾಸಿ ಧರ್ಮಪಾಲ್ (60) ಇವರನ್ನು ದಸ್ತಗಿರಿ ಮಾಡಿ ಅವರುಗಳಿಂದ ಒಟ್ಟು 21,500 ರೂಪಾಯಿ, ಮಟ್ಕ ನಂಬರ್ ಬರೆದ ಚೀಟಿ-1, ಜುಬಿಟರ್ ಸ್ಕೂಟರ್ ಒಂದನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಒಟ್ಟು ಬೆಲೆ 65,000/- ರೂಪಾಯಿ ಆಗಿರುತ್ತದೆ. ಮೂವರು ಆರೋಪಿಗಳನ್ನು ಮತ್ತು ಸೊತ್ತುಗಳನ್ನು ಮುಂದಿನ ಕ್ರಮದ ಬಗ್ಗೆ ಬರ್ಕೆ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ಪೊಲೀಸ್ ಆಯುಕ್ತರು ಮಂಗಳೂರು ನಗರ ರವರ ಆದೇಶದಂತೆ ಮಾನ್ಯ ಪೊಲೀಸ್ ಉಪ – ಆಯುಕ್ತರು ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಅಪರಾಧ ಮತ್ತು ಸಂಚಾರ ರವರ ಮಾರ್ಗದರ್ಶನದಂತೆ ಮೇಲಿನ ಎರಡು ಪ್ರಕರಣಗಳ ಕಾರ್ಯಾಚರಣೆಯಲ್ಲಿ ಮಂಗಳೂರು ಸಿಸಿಬಿ ಘಟಕದ ಪೊಲೀಸ್ ಇನ್ಸ್ ಪೆಕ್ಟರ್ ರವರಾದ ಸುನೀಲ್.ವೈ.ನಾಯ್ಕ್ ಮತ್ತು ಪಿಎಸ್ಐ ರವರಾದ ಶ್ಯಾಮ್ ಸುಂದರ್.ಹೆಚ್.ಎಂ ಮತ್ತು ಸಿಬ್ಬಂದಿಯವರು ಭಾಗವಹಿಸಿದ್ದರು.

Leave a Reply

Please enter your comment!
Please enter your name here