ಸಿ.ಆರ್.ಝಡ್ ಪ್ರದೇಶದಲ್ಲಿ ಜೂನ್ 15 ರಿಂದ ಮರಳುಗಾರಿಕೆ ಸ್ಥಗಿತ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿಆರ್‍ಝಡ್ ಪ್ರದೇಶದಲ್ಲಿ 19 ಮರಳು ಬಾರ್ಸ್‍ಗಳನ್ನು ಗುರುತಿಸಿ ರಾಜ್ಯ ಪರಿಸರ ಆಘಾತ ಅಂದಾಜೀಕರಣ ಪ್ರಾಧಿಕಾರದಿಂದ ಏ.11ರಂದು ಪರಿಸರ ವಿಮೋಚನಾ ಪತ್ರವನ್ನು ಪಡೆದು ಮರಳುಗಾರಿಕೆ ಮತ್ತು ಸಾಗಾಣಿಕೆಗೆ ಅನುಮತಿ ನೀಡಲಾಗಿತ್ತು.

ಪರವಾನಿಗೆಯ ಷರತ್ತುಗಳಂತೆ ಜೂನ್ 15 ರಿಂದ ಆಗಸ್ಟ್ 15 ರವರೆಗೆ ಮೀನುಗಳ ಸಂತಾನೋತ್ಪತ್ತಿ ಕಾಲವಾಗಿರುವುದರಿಂದ ಸದರಿ ಅವಧಿಯಲ್ಲಿ ಮರಳುಗಾರಿಕೆ ನಡೆಸುವುದನ್ನು ಸ್ಥಗಿತಗೊಳಿಸಲಾಗಿದೆ. ಆದ್ದರಿಂದ ಸಾರ್ವಜನಿಕರು ತವ್ಮ್ಮ ಅಗತ್ಯ ಸ್ಥಳೀಯ ಕಾಮಗಾರಿಗಳಿಗೆ ಜೂನ್ 15 ರೊಳಗೆ ಮರಳನ್ನು ಸಂಗ್ರಹಿಸಿಟ್ಟುಕೊಳ್ಳುವಂತೆ ಜಿಲ್ಲಾಧಿಕಾರಿಯವರ ಪ್ರಕಟಣೆ ತಿಳಿಸಿದೆ.

Leave a Reply