ಸೀಮೆಎಣ್ಣೆ ಕೂಪನ್:-ಸೇವಾಕೇಂದ್ರ ತೆರೆಯಲು ಅರ್ಜಿ ಆಹ್ವಾನ

ಸೀಮೆಎಣ್ಣೆ ಕೂಪನ್ : ಸೇವಾಕೇಂದ್ರ ತೆರೆಯಲು ಅರ್ಜಿ ಆಹ್ವಾನ

ಮ0ಗಳೂರು: ಗ್ರಾಮಾಂತರ ಪ್ರದೇಶದ ನ್ಯಾಯಬೆಲೆ ಅಂಗಡಿಗಳಲ್ಲಿ ಆಹಾರ ಧಾನ್ಯ ಹಾಗೂ ಸೀಮೆಎಣ್ಣೆಯನ್ನು ಹೊಸದಾಗಿ ಸಿದ್ಧ ಪಡಿಸಿದ ಆಧಾರ್ ಆಧಾರಿತ ಕೂಪನುಗಳ ಮೂಲಕ ವಿತರಿಸಲು ಉದ್ದೇಶಿಸಿದ್ದು, ಕೂಪನುಗಳನ್ನು ನೀಡಲು ಖಾಸಗಿ ಸೇವಾ ಕೇಂದ್ರಗಳನ್ನು ತೆರೆಯಲು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅರ್ಜಿ ಆಹ್ವಾನಿಸಲಾಗಿದೆ.
ಸೇವಾ ಕೇಂದ್ರ ತೆರೆಯ ಬಯಸುವ ವ್ಯಕ್ತಿಯು ಇಂಟರ್‍ನೆಟ್ ಹಾಗೂ ಬಯೋಮೆಟ್ರಿಕ್ ಸೌಲಭ್ಯವುಳ್ಳ ವೆಬ್‍ಪಾರ್ಲರ್, ಸೈಬರ್ ಕೆಫೆ, ಬಾರ್ ಕೋಡ್ ರೀಡರ್ ಇತ್ಯಾದಿ ಹೊಂದಿರಬೇಕು. ಪಡಿತರ ಚೀಟಿದಾರರ ಬೆರಳಚ್ಚು/ಬಯೋಮೆಟ್ರಿಕ್ ಅನ್ನು ಆಧರ್ ನಂಬ್ರದೊಂದಿಗೆ ಮ್ಯಾಚ್ ಮಾಡಿ ಕೂಪನ್‍ಗಳನ್ನು ಜನರೇಟ್ ಮತ್ತು ಮುದ್ರಿಸಿ ವಿತರಿಸಲು ಸಿದ್ಧರಿರಬೇಕು. ಸೀಮೆಎಣ್ನೆ ಕೂಪನನ್ನು ಸೃಜಿಸಲು ಸೇವ ಶುಲ್ಕ ತಲಾ ರೂ. 3 ಹಾಗೂ ಸೀಮೆಎಣ್ಣೆ ವಿತರಣಾ ಸಮಯದಲ್ಲಿ ಅಪ್ಲೋಡ್ ಮಾಡಲು 75 ಪೈಸೆ ನೀಡಲಾಗುವುದು. ಆಫ್ ಲೈನ್‍ನಲ್ಲಿ ಅಂದರೆ ವಿತರಣೆ ಮುಗಿದ ನಂತರ ದೊಡ್ಡ ಪ್ರಮಾಣದಲ್ಲಿ ಅಪ್‍ಲೋಡ್ ಮಡಿದಲ್ಲಿ ತಲಾ 20 ಪೈಸೆಯಂತೆ ನೀಡಲಾಗುವುದು.
ಸೇವಾಕೇಂದ್ರ ತೆರೆಯಲು ಅಪೇಕ್ಷಿತರು ನಿಗದಿತ ನಮೂನೆಯಲ್ಲಿ 15 ದಿನದೊಳಗೆ ಅರ್ಜಿ ಸಲ್ಲಿಸಬೇಕಾಗಿದೆ ಹಾಗೂ ಆಹಾರ ಇಲಾಖೆಯ ಉಪನಿರ್ದೇಶಕರೊಂದಿಗೆ ಸರಕಾರ ನಿಗದಿ ಪಡಿಸಿದ ನಮೂನೆಯಂತೆ ಕರಾರು ಮಾಡಿಕೊಳ್ಳಬೇಕು. ನಿಗದಿತ ನಮೂನೆ ಮತ್ತು ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕು ಕಛೇರಿ ಅಥವಾ ಉಪ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಲು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ, ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.

Leave a Reply

Please enter your comment!
Please enter your name here