ಸುರತ್ಕಲ್: ವಿವಾಹಿತ ಮಹಿಳೆಗೆ ಉತ್ತರ ಪ್ರದೇಶ ಮೂಲದ ಯುವಕನಿಂದ ಇರಿತ ; ಆಸ್ಪತ್ರೆಗೆ ದಾಖಲು

ಸುರತ್ಕಲ್: ವಿವಾಹಿತ ಮಹಿಳೆಯೋರ್ವಳನ್ನು ಉತ್ತರ ಪ್ರದೇಶದ ವ್ಯಕ್ತಿಯೋರ್ವ ಚೂರಿಯಿಂದ ಘಟನೆ ಮಂಗಳವಾರ ಮುಂಜಾನೆ ಸುರತ್ಕಲ್  ಕುಳಾಯಿ ಬಳಿ ನಡೆದಿದೆ.

1-assualt-kulai-20150804

ಗಾಯಗೊಂಡ ಮಹಿಳೆಯನ್ನು ಕೃಷ್ಣಾಪುರ ನಿವಾಸಿ ಸೌಮ್ಯ(33) ಎಂದು ಗುರುತಿಸಲಾಗಿದ್ದು, ಗಾಯಾಳು ಮಹಿಳೆಯನ್ನು ನಗರದ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿದೆ.

ಕುಳಾಯಿ ಮಕ್ರಾನ ಮಾರ್ಬಲ್ ಉದ್ಯೋಗಿಯಾಗಿರುವ ಸೌಮ್ಯ ಎಂದಿನಂತೆ ಮುಂಜಾನೆ ಬಸ್ಸಿಳಿದು ಕೆಲಸ ಮಾಡುವಲ್ಲಿಗೆ ಬರುತ್ತಿದ್ದಾಗ ಏಕಾಏಕಿ ಪ್ರತ್ಯಕ್ಷನಾದ ಉತ್ತರಪ್ರದೇಶ ಮೂಲದ ಅಜೀಮ್ ಹರಿತವಾದ ಚೂರಿಯಿಂದ ಆಕೆಯ ಮೇಲೆ ದಾಳಿ ನಡೆಸಿದ್ದು, ಆಕೆಯ ಕುತ್ತಿಗೆ ಮುಖದ ಭಾಗಕ್ಕೆ ಗಂಭೀರ ಗಾಯಗೊಳಿಸಿ ಸ್ಥಳದಿಂದ ಪರಾರಿಯಾಗಿದ್ದು, ಸ್ಥಳೀಯರು ಆತನನ್ನು ಬೆನ್ನಟ್ಟಿ ಹಿಡಿಯುವ ಪ್ರಯತ್ನ ಮಾಡಿದ್ದು, ಸಫಲವಾಗಿಲ್ಲ. ಹಲ್ಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.

ಸುರತ್ಕಲ್ ಪೋಲಿಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿದ್ದಾರೆ

Leave a Reply