ಸುಳ್ಯ: ಬೈಕಿಗೆ ಲಾರಿ ಡಿಕ್ಕಿ ; ಕೆವಿಜಿ ಕಾಲೇಜಿನ ಉಪನ್ಯಾಸಕ ಸಾವು

ಸುಳ್ಯ: ಲಾರಿಯ ಹಿಂಭಾಗಕ್ಕೆ ಬೈಕ್‌ ಢಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟ ಘಟನೆ ಸುಳ್ಯದ ಅಡ್ಕಾರ್ ಬಳಿ ಮಂಗಳವಾರ ಸಂಜೆ ನಡೆದಿದೆ.

ಸುಳ್ಯ ಕೆವಿಜಿ ಇಂಜಿನಿಯರಿಂಗ್‌ ಕಾಲೇಜಿನ ಮೆಕ್ಯಾನಿಕಲ್‌ ವಿಭಾಗದ ಉಪನ್ಯಾಸಕ ಮಹಾಬಲ ಕಿರಣ್‌ ಕಾಲೇಜು ಮುಗಿಸಿ ಬೈಕ್‌ನಲ್ಲಿ ತನ್ನ ಊರಾದ ಕಾಸರಗೋಡಿನ ಬದಿಯಡ್ಕಕ್ಕೆ ಹೋಗುತ್ತಿದ್ದರು. ಈ ವೇಳೆ ಅಡ್ಕಾರ್ ಬಳಿ ಲಾರಿಯ ಹಿಂಬದಿಗೆ ಬೈಕ್‌ ಢಿಕ್ಕಿ ಹೊಡೆಯಿತು.
ಅಪಘಾತದ ರಭಸಕ್ಕೆ ಬೈಕಿಗೆ ಬೆಂಕಿ ಹೊತ್ತಿಕೊಂಡು ಉರಿದ ಪರಿಣಾಮ ಗಂಭೀರ ಗಾಯಗೊಂಡ ಮಹಾಬಲ ಕಿರಣ್ ಸ್ಥಳದಲ್ಲೇ ಮೃತಪಟ್ಟರು

Leave a Reply